ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠಾ (Pran Pratishtha) ಸಮಾರಂಭದಲ್ಲಿ ದೇಶದ ಬೇರೆ ಬೇರೆ ಭಾಗಗಳ 50ಕ್ಕೂ ಅಧಿಕ ಸಾಂಪ್ರದಾಯಿಕ ವಾದ್ಯಗಳಿಂದ ಮಂಗಳ ನಾದ ಹೊಮ್ಮಲಿದೆ.
ಸಂಗೀತ ಕಾರ್ಯಕ್ರಮವು ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ. ಎರಡು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ನಂತರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ವಾದ್ಯಗಳಲ್ಲಿ ಉತ್ತರ ಪ್ರದೇಶದ ಪಖಾವಾಜ್, ಕೊಳಲು ಮತ್ತು ಧೋಲಕ್, ಕರ್ನಾಟಕದ ವೀಣೆ, ಪಂಜಾಬ್ನಿಂದ ಅಲ್ಗೋಜಾ, ಮಹಾರಾಷ್ಟ್ರದಿಂದ ಸುಂದರಿ, ಒಡಿಶಾದಿಂದ ಮರ್ದಲ ಸೇರಿದೆಂತ ಹಲವು ಕಾರ್ಯಕ್ರಮಗಳು ಇರಲಿವೆ.
ಬೇರೆ ಬೇರೆ ರಾಜ್ಯಗಳಿಂದ ಸುಮಾರು 50ಕ್ಕೂ ಅಧಿಕ ವಾದ್ಯಗಳು ಈ ಶುಭ ಸಮಾರಂಭದಲ್ಲಿ ಮಂಗಳಕರ ನಾದ ಹೊಮ್ಮಿಸಲಿವೆ.
ಅಯೋಧ್ಯೆಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನ ನೀಡಲಾಗಿದ್ದು, ಪ್ರಮುಖ ವೃತ್ತವೊಂದಕ್ಕೆ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರಿಡಲಾಗಿದೆ.