Crime: ವಂಚನೆಗೆ ಒಳಗಾದ ವಿದೇಶಿ ಪ್ರಜೆಗೆ ಹಣ ಮರುಳಿಸಿದ ಪೊಲೀಸರು

1 min read
Mangalore Police Saaksha Tv

ವಂಚನೆಗೆ ಒಳಗಾದ ವಿದೇಶಿ ಪ್ರಜೆಗೆ ಹಣ ಮರುಳಿಸಿದ ಪೊಲೀಸರು

ಮಂಗಳೂರು: ವಿದೇಶಿ ಪ್ರಜೆಗೆ ವಂಚಿಸಿ, ವ್ಯಕ್ತಿಯೋರ್ವ 7.7 ಲಕ್ಷ ರೂ ಹಣವನ್ನು ಪಡೆದ್ದಿದ್ದ ಈ ಹಣವನ್ನು ಮಂಗಳೂರು ಪೊಲೀಸರು ಮರಳಿ ತೆಗೆಸಿಕೊಟ್ಟಿದ್ದಾರೆ.

ಫ್ರಾನ್ಸ್ ಮೂಲದ ಪ್ರಜೆ ಯೋ ಫಿಲ್ ವಂಚನೆಗೆ ಒಳಗಾಗಿದ್ದ ವಿದೇಶಿ ಪ್ರಜೆ. ಸಧ್ಯ ಪ್ರಜೆ ಯೋ ಫಿಲ್ ಅವರ ಹಣವನ್ನು ಪೊಲೀಸರು ಮರಳಿ ತೆಗೆಸಿಕೊಟ್ಟಿದಕ್ಕೆ ಮಂಗಳೂರು ಪೊಲೀಸರಿಗೆ ಧ್ಯನವಾದ ಹೇಳಿದ್ದಾರೆ .

ಫ್ರಾನ್ಸ್ ಮೂಲದ ಪ್ರಜೆ ಯೋ ಫಿಲ್ ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಚಿಲಿಂಬಿಯ ಅಪಾರ್ಟ್‌ಮೆಂಟ್​ನಲ್ಲಿ ವಾಸವಾಗಿದ್ದರು. ಇವರಿಂದ ಪರಿಚಿತನಾದ ವ್ಯಕ್ತಿಯೋರ್ವ ಈತನಿಂದ ಹೊಟೇಲ್ ಆರಂಭಿಸಲೆಂದು ಏಳು ಲಕ್ಷ ರೂಪಾಯಿ ಪಡೆದು, ನಂತರ ಸಂಪರ್ಕ ಕೊನೆಗೊಳಿಸಿದ್ದನು.

Mangalore Saaksha Tv

ಯೋ ಫಿಲ್​ ಕ್ರೀಡಾಪಟುವಾಗಿದ್ದು ಮಂಗಳೂರಿನ ಸೈಕ್ಲಿಸ್ಟ್​ಗಳ ಸಂಪರ್ಕ ಹೊಂದಿದ್ದನು. ತನ್ನ ಪರಿಚಯಸ್ಥ ಸೈಕ್ಲಿಸ್ಟ್​ಗಳಲ್ಲಿ ತನಗಾದ ವಂಚನೆಯ ಬಗ್ಗೆ ತಿಳಿಸಿದ್ದಾನೆ. ಅವರ ಸಲಹೆಯಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾನೆ. ಈ ಬಗ್ಗೆ ಮುತುವರ್ಜಿವಹಿಸಿ ತನಿಖೆ ನಡೆಸಿರುವ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.

ವಂಚಕನ ತಂದೆ ಫ್ರಾನ್ಸ್ ಪ್ರಜೆಗೆ ಪುತ್ರ ವಂಚಿಸಿರುವ ಸಂಪೂರ್ಣ ಹಣ ವಾಪಸ್ ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿಲ್ಲ. ವಿಚಾರಣೆಗೆ ಕರೆದ ಸಂದರ್ಭ ಠಾಣೆಗೆ ಹಾಜರಾಗಬೇಕೆಂದು ನೋಟಿಸ್ ಕೊಟ್ಟು ಕಳುಹಿಸಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd