ನನ್ನ ಜೀವನದಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ ಎದು ಕನ್ನಡದ ‘ಸೂರ್ಯಕಾಂತಿ’ ನಟಿ ರೆಜಿನಾ (Regina Cassandra) ಬಹಿರಂಗವಾಗಿಯೇ ಹೇಳಿದ್ದಾರೆ.
ಈಗ ಬ್ಯೂಜಿಯಾಗಿರುವ ನಟಿ ರಜಿನಾ, ‘ಉತ್ಸವಂ’ ಸಿನಿಮಾ ಪ್ರಚಾರದಲ್ಲಿದ್ದಾರೆ. ಈ ಮಧ್ಯೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನನ್ನ ಬದುಕಿನಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ ಎಂದು ಹಳೆಯ ರಿಲೇಷನ್ಶಿಪ್ ಕುರಿತು ಹೇಳಿದ್ದಾರೆ.
ಹೀಗಾಗಿ ನನಗೆ ಡೇಟಿಂಗ್ ಎಂದರೆ ಮಾಮೂಲಿ. ಹಲವಾರು ಜನರ ಜೊತೆ ನಾನು ಸುತ್ತಾಡಿದ್ದೇನೆ ಎಂದು ಹೇಳಿದ್ದಾರೆ. ನನ್ನಿಂದ ನನ್ನ ಹಳೆಯ ಸಂಬಂಧಗಳ ಕುರಿತ ವಿಚಾರವನ್ನೆಲ್ಲ ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ನಾನು ಎಲ್ಲವನ್ನೂ ನೇರವಾಗಿಯೇ ಹೇಳುವ ಅಭ್ಯಾಸ ರೂಡಿಸಿಕೊಂಡಿದ್ದೇನೆ ಎಂದಿದ್ದಾರೆ.
ಈ ಹೇಳಿಕೆಯಿಂದ ಮಾಜಿ ಬಾಯ್ ಫ್ರೆಂಡ್ ಗಳು ಸೇರಿದಂತೆ ಅವರ ಕುಟುಂಬಸ್ಥರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ತುಂಬಾ ಸ್ವತಂತ್ರ್ಯವಾಗಿ ಬೆಳೆದಿದ್ದೇನೆ. ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಮರ್ಥವಾದ ಹುಡುಗನನ್ನೂ ಹುಡುಕುತ್ತಿದ್ದೇನೆ. ಜವಾಬ್ದಾರಿಗಳನ್ನೂ ಅರಿತು ಬದುಕು ನಡೆಸುವವರ ಜೊತೆ ಇರಲು ನನಗೆ ಇಷ್ಟವೆಂದು ಹೇಳಿದ್ದಾರೆ.