ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ (South Africa) ಮಾಜಿ ಕ್ರಿಕೆಟಿಗ, ವೇಗಿ ಬೌಲರ್ ಮಾರ್ನೆ ಮಾರ್ಕೆಲ್ (Morne Morkel) ಆಯ್ಕೆಯಾಗಿದ್ದಾರೆ.
ಭಾರತ ಕ್ರಿಕೆಟ್ ತಂಡಕ್ಕೆ (Team India) ಬೌಲಿಂಗ್ ಕೋಚ್ (Bowling Coach) ಆಗಿ ನೇಮಕವಾಗಿದ್ದು, ಅವರು 2023ರ ಏಕದಿನ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಐಪಿಎಲ್ ನಲ್ಲಿ (IPL) ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಡೆರ್ ಡೇವಿಲ್ಸ್ ತಂಡಗಳಲ್ಲಿ ಆಡಿದ್ದರು.
ಭಾರತ ತಂಡದ ಹೊಸ ಕೋಚ್ ಆಗಿರುವ ಗೌತಮ್ ಗಂಭೀರ್ (Gautam Gambhir) ಸಲಹೆಯಂತೆ ಮಾರ್ಕೆಲ್ ಅವರನ್ನು ಆಯ್ಕೆ ಮಾಲಾಗಿದೆ ಎನ್ನಲಾಗಿದೆ. ಲಕ್ನೋ ತಂಡದಲ್ಲಿ ಗೌತಮ್ ಗಂಭೀರ್ ಮತ್ತು ಮಾರ್ಕೆಲ್ ಜೊತೆಯಾಗಿ ಕೆಲಸ ಮಾಡಿದ್ದರು.
39 ವರ್ಷದ ಮಾರ್ಕೆಲ್ ದಕ್ಷಿಣ ಆಫ್ರಿಕಾ ಪರವಾಗಿ 86 ಟೆಸ್ಟ್, 117 ಏಕದಿನ, 44 ಟಿ20 ಪಂದ್ಯಗಳನ್ನಾಡಿದ್ದಾರೆ. ಅಲ್ಲದೇ, ಅವರು ಒಟ್ಟು 544 ವಿಕೆಟ್ ಗಳನ್ನು ಪಡೆದಿದ್ದಾರೆ.