ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಪುರುಷ ಮತ್ತು ವಿಧವೆ
ಮಹರಾಷ್ಟ್ರ: ವಿವಾಹಿತ ಪುರುಷ ಮತ್ತು ವಿಧವೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ.
ಶೋಭಾ ಪವಾರ (36) ಮತ್ತು ಪ್ರಕಾಶ್ ನಿಕಂ (49) ಮೃತ ದುರ್ದೈವಿಗಳು. ಇವರ ಬ್ಬರ ನಡುವೆ ಪ್ರೇಮಾಂಕುರವಾಗಿ, ಸಂಭಂದ ಏರ್ಪಟ್ಟಿತ್ತು ಎನ್ನಲಾಗುತ್ತಿದೆ. ಮಾರ್ಚ್ 22 ರಂದು ಊರ ಹೊರಗಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಸತಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರಿಬ್ಬರು ಪಟಾನ್ ಗ್ರಾಮದ ನಿವಾಸಿಗಳಾಗಿದ್ದು, ಕಲೆವು ವರ್ಷಗಳ ಹಿಂದೆ ಶೋಭಾ ಪತಿ ತೀರಿಕೊಂಡಿದ್ದರು. ನಂತರ ಪ್ರಕಾಶ್ ಜೊತೆಗೆ ಲವ್ವಿ ಡವ್ವಿ ಶುರುವಾಗಿತ್ತು. ಶೋಭಾ ತನ್ನ ಕೆಲಸದ ನಿಮಿತ್ತ ಮುಂಬೈನಲ್ಲಿ ವಾಸವಾಗಿದ್ದಳು. ನಂತರ ಮಾರ್ಚ್ 20 ರಂದು ಶೋಭಾ ಊರಿಗೆ ಮರಳಿದ್ದಾಳೆ.
ಬಳಿಕ ಮಾರ್ಚ್ 22 ರಂದು ಪಟಾನ್ ಗೆ ಹೋಗಿ ಬರುವುದಾಗಿ ಕುಟುಂಬಸ್ಥಿಗೆ ತಿಳಿಸಿದ್ದಾಳೆ. ಪಟಾನ್ ಗೆ ಹೋದ ಶೋಭಾ ಮರಳಿ ಮನೆಗೆ ಬಂದಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಹುಡಉಕಾಟದಲ್ಲಿ ತೊಡಗಿದ್ದರು. ಆದರೆ ಶೋಭಾ ಆತ್ಮಹತ್ಯೆ ಆಡಿಕೊಂಡಿರುವದಾಗಿ ಸುದ್ದಿ ಬಂದಿದೆ.
ಪಟಾನ್ ಗೆ ಹೋದ ಶೋಭಾ ಪ್ರಕಾಶ ಮನೆಗೆ ತೆರಳಿದ್ದು, ಅಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ನಂತರ ಇಬ್ಬರೂ ಒಟ್ಟಿಗೆ ಊರ ಹೊರಗೆ ಹೋಗಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಇದನ್ನು ತಿಳಿದ ಪ್ರಕಾಶ್ ನ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಕೆ ಆರಂಭಿಸಿದ್ದಾರೆ.