ಹೊನ್ನಿಗಾಗಿ ಹೆಣ್ಣನ್ನು ಕೊಂದ ಗಂಡನ ಮನೆಯವರು..?
ಬಿಹಾರ: ವರದಕ್ಷಿಣೆ ಕಿರುಕುಳಕ್ಕೆ ವಿವಾಹಿತ ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.
ಪ್ರಿಯಾಂಕಾ ಕುಮಾರ್(25) ಮೃತ ದುರ್ದೈವಿಯೆಂದು ಗುರುತಿಸಲಾಗಿದೆ. ಪಾಟ್ನಾದ ಫುಲ್ವಾರಿ ಶರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಪತ್ನಿಯ ಕೊಲೆಯ ಬೆನ್ನಲ್ಲೇ ಗಂಡನ ಮನೆಯವರು ತೆಲೆಮರಿಸಿಕೊಂಡಿದ್ದಾರೆ. ಇನ್ನೂ ವರದಕ್ಷಿಣೆಗೋಸ್ಕರ ಗಂಡನ ಮನೆಯವರು ಕೊಲೆ ಮಾಡಿದ್ದಾರೆಂದು ಮೃತಳ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ನಡೆದಿದ್ದೇನು?: ನಾಲ್ಕು ವರ್ಷದ ಹಿಂದೆ ಪ್ರಿಯಂಕಾಳನ್ನು ನಿರಂಜನ್ ಕುಮಾರ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರ ಪತಿ ನಿರಂಜನ್ ಹಾಗೂ ಕುಟಂಬಸ್ಥರು ಪ್ರಿಯಾಂಕಾಳಿಗೆ ದೊಡ್ಡ ಮೊತ್ತದ ಹಣಕ್ಕಾಗಿ ಪೀಡಿಸುತ್ತಿದ್ದರು. ಆದರೆ ಹಣ ನೀಡದ ಕಾರಣ ಕಳೆದ ಗುರುವಾರ ತಡರಾತ್ರಿ ಪ್ರಿಯಂಕಾ ಕುಮಾರಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಮೃತದೇಹವನ್ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಫುಲ್ವಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಎಸ್ಐ ಅನುಪ್ರಿಯಾ, ವರದಕ್ಷಿಣೆಗೋಸ್ಕರ ಪ್ರಿಯಾಂಕಾಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ.