ಮೈಸೂರು: ಕೋರೋನಾ ಮಹಾಮಾರಿ ತಡೆಗೆ ರಾಜ್ಯ ಸರ್ಕಾರ ಜೂನ್18ರನ್ನು ಮಾಸ್ಕ್ ದಿನವನ್ನಾಗಿ ಆಚರಣೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಮಹಾ ನಗರಪಾಲಿಕೆ ವತಿಯಿಂದ ಬೃಹತ್ ಮಾಸ್ಕ್ ಜಾಗೃತಿ ಜಾಥಾ ನಡೆಯಿತು. ನಗರದ ಅಗ್ರಹಾರ ವೃತ್ತದಿಂದ ಆರಂಭವಾದ ಜನ ಜಾಗೃತಿ ಜಾಥ ವಿವಿಧ ರಸ್ತೆಗಳಲ್ಲಿ ಸಂಚರಿಸಿತು.
ಅಗ್ರಹಾರ ವೃತ್ತದಲ್ಲಿ ಆರಂಭಗೊಂಡ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಹಸಿರು ನಿಶಾನೆ ತೋರಿದರು. ಈ ವೇಳೆ ಮೈಸೂರು ಪಾಲಿಕೆ ಮೇಯರ್ ತಸ್ಲೀಮಾ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು, ಪೌರ ನೌಕರರು ಹಾಜರಿದ್ದರು.
ಜಾಥಾ ವೇಳೆ ಮಾಸ್ಕ್ ಇಲ್ಲದ ನಾಗರಿಕರಿಗೆ ಮಾಸ್ಕ್ ವಿತರಿಸಿ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಕೋರೋನಾ ಮಹಾಮಾರಿಯಿಂದ ಜೀವಕ್ಕ ಕುತ್ತು ಬರಲಿದೆ ಎಂಬ ಸಂದೇಶವನ್ನ ಯಮ ಧರ್ಮರಾಜ ಮತ್ತು ಆತನ ಬಂಟರ ವೇಷದಾರಿಗಳು ನೀಡಿದರು.
ಕೋವಿಡ್ 19 ಅಂಗವಾಗಿ ಪಾಲಿಕೆ ವತಿಯಿಂದ ಸರ್ಕಾರದ ಸೂಚನೆಯಂತೆ ಮಾಸ್ಕ್ ಜಾಗೃತಿ ಜಾಥವನ್ನ ನಡೆಸಲಾಗುತ್ತಿದೆ. ಕೋರೋನಾ ಮಹಾಮಾರಿಯ ಸೋಂಕು ಹರಡದಂತೆ ತಡೆಯಲು ಕಡ್ಡಾಯವಾಗಿ ಮಾಸ್ಕ್ ಬಳಸಿ ಕೋವಿಡ್ ನಿಯಮಗಳನ್ನ ಪಾಲಿಸಿ ಎಂದು ಮೇಯರ್ ತಸ್ನೀಮಾ ಮನವಿ ಮಾಡಿದರು.
ಯಮನ ವೇಷ ದಾರಿಗೂ ಮಾಸ್ಕ್
ಮಾಸ್ಕ್ ದಿನಾಚರಣೆ ಅಂಗವಾಗಿ ಮೈಸೂರು ನಗರ ಪಾಲಿಕೆ ಹಮ್ಮಿಕೊಂಡಿದ್ದ ಮಾಸ್ಕ್ ಜನ ಜಾಗೃತಿ ಜಾಥದ ವೇಳೆ ಮಹಾಮಾರಿಯಿಂದ ಪ್ರಾಣಕ್ಕೆ ಕುತ್ತು ಎಂಬ ಸಂದೇಶವನ್ನ ನೀಡಲು ಬಂದಿದ್ದ ಯಮ ವೇಷಧಾರಿಗೂ ಪಾಲಿಕೆ ಸಿಬ್ಬಂಧಿ ಮಾಸ್ಕ್ ಧರಿಸಿದ್ದು ಗಮನ ಸೆಳೆಯಿತು. ಯಮ ವೇಷ ದಾರಿಯಲ್ಲದೆ ಆತನ ಬಂಟರಿಗೂ ಮಾಸ್ಕ್ ಹಾಕಿಸಲಾಗಿತ್ತು.