ಮದವೆ ಮನೆಗೆ ಲಾರಿ ನುಗ್ಗಿ 3 ಜನರ ಸಾವು
ಬಿಹಾರ: ಮದುವೆ ಮನೆಯಲ್ಲಿ ನೃತ್ಯ ಮಾಡುತ್ತಿದ್ದ ಮಹಿಳೆಯರ ಮೇಲೆ ಟ್ರಕ್ ಹರಿದು ಸ್ಥಳದಲ್ಲೇ 3 ಸಾವನ್ನಪ್ಪಿದ್ದು, 5 ಮಹಿಳೆಯರಿಗೆ ಗಂಭಿರವಾಗಿ ಗಾಯಗಳಾಗಿರುವ ಘಟನೆ ಬಿಹಾರದ ಛಾಪ್ರಾದ ಮಶ್ರಕ್ ಗ್ರಾಮದಲ್ಲಿ ನಡೆದಿದೆ.
ಸೈರುಲ್ ಬೀಬಿ (50), ನಜ್ಮಾ ಬೀಬಿ (45), ಸೈಶಾ ಬೇಗಂ (50) ಮೃತ ದುರ್ದೈವಿಗಳು. ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಮದವೆ ಮನೆಗೆ ನುಗ್ಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಘಲಿಸಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮಶ್ರಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ನಡೆದಿದ್ದು ಏನು? ಗ್ರಾಮದ ಮನೆಯೊಂದರಲ್ಲಿ ತಡರಾತ್ರಿ ಬಹಳ ವಿಜೃಂಭಣೆಯಿಂದ ಮದುವೆ ಸಮಾರಂಭ ನಡೆಯುತ್ತಿತ್ತು. ಈ ಮದುವೆ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ, ಮಹಿಳೆಯರೇ ಸೇರಿದ್ದರು. ಎಲ್ಲರೂ ಸೇರಿ ಮನೆಯಲ್ಲಿ ಡೊಮ್ಕಾಚ್ ನೃತ್ಯ ಮಾಡುತ್ತಿದ್ದರು.
ಈ ವೇಳೆ ಲಾರಿಯೊಂದು ಮದುವೆ ಮನೆಗೆ ನುಗ್ಗಿದ್ದು, ನೃತ್ಯ ಮಾಡುತ್ತಿದ್ದ ಮಹಿಳೆಯರ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ 3 ಮೃತಪಟ್ಟಿದ್ದು, 5 ಗಂಭಿರಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಧ್ಯ ಮದವೆ ಮನೆ ಸ್ಮಶಾನದಂತಾಗಿದ್ದು, ಮನೆ ಶೋಕಸಾಗರದಲ್ಲಿ ಮುಳುಗಿದೆ.
ಘಟನೆ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.