ಹೊಸ ಸರ್ಕಾರ ಅಧಿಕಾರಕ್ಕೆ ಬಂದು 112 ದಿನಗಳು ಕಳೆದರೂ ವರ್ಗಾವಣೆ ಕುರಿತ ಮನವಿಗಳು ಮಾತ್ರ ನಿಂತಿಲ್ಲ. ವರ್ಗಾವಣೆ ಕುರಿತು ಸರ್ಕಾರದ ವಿರುದ್ಧ ಆರೋಪಗಳು ಕೇಳಿ ಬರುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ, ಬ್ರೇಕ್ ಹಾಕುವ ಕೆಲಸ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಗಳು ಆಡಳಿತಾತ್ಮಕ ಕಾರಣಗಳಿಗಾಗಿ ಯಾವುದೇ ವರ್ಗಾವಣೆ ಕೋರಿಕೆಗಳನ್ನು ಸ್ವೀಕರಿಸಬಾರದು ಎಂದು ಸಂಪುಟದ ಸಚಿವರು, ಶಾಸಕರು ಮತ್ತು ಎಂಎಲ್ಸಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 13 ರಂದು ಏಳು ಅಧಿಕಾರಿಗಳು ಮತ್ತು ಮರುದಿನ ಸೆಪ್ಟೆಂಬರ್ 14 ರಂದು ಮೂವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಬೆನ್ನಲ್ಲೇ ಕೆಪಿಎಸ್ಸಿ ಕಾರ್ಯದರ್ಶಿ ಕಿಶೋರ್ ವಿಕಾಸ್ ಸುರಾಳ್ಕರ್ ವರ್ಗಾವಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಬ್ರೆಕ್ ಹಾಕುವ ಯತ್ನ ನಡೆಯುತ್ತಿದೆ.