ಗಾಂಧೀನಗರ: ಹಿಂದೂ ಸಂಘಟನೆಯ ನಾಯಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮುಸ್ಲಿಂ ಧರ್ಮಗುರುವೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.
27 ವರ್ಷದ ಮೌಲ್ವಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ಮದರಸಾದಲ್ಲಿ ಪಾಠ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯು ಪಾಕಿಸ್ತಾನದ ಡೊಂಗರ್ ಎಂಬಾತ ಹಾಗೂ ನೇಪಾಳದ ಸೆಹನಾಜ್ ಎಂಬ ವ್ಯಕ್ತಿಯೊಂದಿಗೆ ಕಳೆದ 2 ವರ್ಷಗಳಿಂದ ಸಂಪರ್ಕ ಹೊಂದಿದ್ದ. ಭಾರತದಲ್ಲಿ ಹಿಂದೂ ಸಂಘಟನೆಗಳು ಪ್ರವಾದಿಯನ್ನು ನಿರಂತರವಾಗಿ ಅವಮಾನಿಸುತ್ತಿವೆ ಎಂದು ಪಾಕಿಸ್ತಾನ ಹಾಗೂ ನೇಪಾಳದವರು, ಮೌಲ್ವಿಗೆ ಪ್ರಚೋದನೆ ನೀಡಿದ್ದರು ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.
ಈತ ಹಿಂದೂ ಸಂಘಟನೆ ನಾಯಕನ ಹತ್ಯೆಗೆ 1 ಕೋಟಿ ರೂ. ಸುಪಾರಿ ನೀಡಲು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸಂಚು ರೂಪಿಸಿದ್ದ ಎಂದು ಸೂರತ್‌ನ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ. ಅಲ್ಲದೇ, ಬಂಧಿತ ಆರೋಪಿ ಪಾಕಿಸ್ತಾನ, ವಿಯೆಟ್ನಾಂ, ಇಂಡೋನೇಷ್ಯಾ, ಕಜಕಿಸ್ತಾನ್, ಲಾವೋಸ್ ನಂತಹ ವಿವಿಧ ದೇಶಗಳ ಕೋಡ್ ಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬುವುದು ಕೂಡ ತನಿಖೆಯಲ್ಲಿ ತಿಳಿದು ಬಂದಿದೆ.