8 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ ಮಾರಿಷಸ್ ಪ್ರಧಾನಿ
1 min read
8 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ ಮಾರಿಷಸ್ ಪ್ರಧಾನಿ
ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಎಂಟು ದಿನಗಳ ಭಾರತ ಪ್ರವಾಸಕ್ಕಾಗಿ ನಿನ್ನೆ ಮುಂಬೈಗೆ ಆಗಮಿಸಿದರು. ಜುಗ್ನಾಥ್ ಅವರ ಪತ್ನಿ ಕೊಬಿತಾ ಜುಗ್ನಾಥ್ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಏಪ್ರಿಲ್ 19 ರಂದು ಜಾಮ್ನಗರದಲ್ಲಿ ನಡೆಯುತ್ತಿರುವ WHO -Global Centre for Traditional Medicine ಭೂಮಿಪೂಜೆ ಸಮಾರಂಭದಲ್ಲಿ ಮತ್ತು ಏಪ್ರಿಲ್ 20 ರಂದು ಗುಜರಾತ್ನ ಗಾಂಧಿನಗರದಲ್ಲಿ ಜಾಗತಿಕ ಆಯುಷ್ ಹೂಡಿಕೆ ಮತ್ತು ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಭಾಗವಹಿಸಲಿದ್ದಾರೆ.
ಗುಜರಾತ್ ಮತ್ತು ನವದೆಹಲಿಯಲ್ಲಿ ಅಧಿಕೃತ ಸಮಾರಂಭಗಳ ಹೊರತಾಗಿ, ಮಾರಿಷಸ್ ಪ್ರಧಾನಿ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಮಾರಿಷಸ್ನ ದ್ವಿಪಕ್ಷೀಯ ಸಂಬಂಧಗಳ ಕುರಿತು ಉನ್ನತ ಮಟ್ಟದ ಭೇಟಿಗಳು ನಡೆಯಲಿವೆ ಎಂದು ವರದಿಯಾಗಿದೆ.
ಮಾಜಿ ರಾಯಭಾರಿ ಅಶೋಕ್ ಸಜ್ಜನ್ಹರ್ ಮಾತನಾಡಿ ಈ ಭೇಟಿಯು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.