MCD Exit Poll: ದೆಹಲಿ ಗದ್ದುಗೆ ಆಪ್ (aap)ಗೆ ಎಂದ ಎಕ್ಸಿಟ್ ಪೋಲ್…
ಗುಜರಾತ್ ಹಿಮಾಚಲ ಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶ ಏನೇ ಇರಲಿ ರಾಷ್ಟ್ರ ರಾಜಧಾನಿ ದೆಹಲಿಯ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಮತ್ತೆ ಆಮ್ ಆದ್ಮಿ ಪಕ್ಷ ತನ್ನ ಪ್ರದರ್ಶನವನ್ನ ತೋರಿಸಲಿದೆ.
ಈ ಭಾರಿಯ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ ಭಾರಿ ಮುನ್ನಡೆ ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿವೆ.
255 ವಾರ್ಡ್ ಗಳಲ್ಲಿ ಎಎಪಿ 150ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಬಿಜೆಪಿ 60 ರಿಂದ 90 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಹೇಳಿದ್ದಾರೆ.
ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಎಎಪಿ ಭಾರಿ ಶೇಕಡವಾರು ಮತಗಳನ್ನ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದೆವೆ. ಆಮ್ ಆದ್ಮಿ ಪಕ್ಷ ಶೇ 43 % ರಷ್ಟು ಮತಗಳನ್ನ ಪಡೆದರೆ ಬಿಜೆಪಿ 43% ಮತಗಳನ್ನ ಪಡೆಯಲಿದೆ. ಕಾಂಗ್ರೆಸ್ 10 ಪ್ರತಿಶತಕ್ಕೆ ಸೀಮಿತವಾಗಲಿದೆ ಎಂದು ಎಕ್ಸಿಟ್ ಪೋಲ್ ಬಹಿರಂಗಪಡಿಸಿದೆ.
ಡಿಸೆಂಬರ್ 4 ರಂದು ನಡೆದಿದ್ದ ದೆಹಲಿ ಮುನ್ಸಿಪಲ್ ಚುನಾವಣೆಯ ಮತ ಎಣಿಕೆ ಡಿಸೆಂಬರ್ 87 ರಂದು ನಡೆಯಲಿದೆ.
MCD Exit Poll: Exit Poll for AAP in Delhi