ಹೋಮ್ ಐಸೋಲೇಷನ್ ನಲ್ಲಿ ಇರುವವರಿಗೆ ಮೆಡಿಕಲ್ ಕಿಟ್
ಬೆಂಗಳೂರು : ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ಕೆಲ ಕಠಿಣ ನಿಯಮಗಳ ಜೊತೆ ಜೊತೆಗೆ ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಮೆಡಿಕಲ್ ಕಿಟ್ ವಿತರಣೆಗೆ ಮುಂದಾಗಿದೆ.
ಕೊರೊನಾ ಸೋಂಕಿನಿಂದ ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಬಿಬಿಎಂಪಿ ಹೋಮ್ ಐಸೋಲೇಷನ್ ಮೆಡಿಕಲ್ ಕಿಟ್ ವಿತರಣೆ ಮಾಡಲಿದೆ. ಇದರಲ್ಲಿ ಸೋಂಕಿತರಿಗೆ ಮಾತ್ರೆ ಇರುತ್ತೆ. ರೋಗ ಲಕ್ಷಣ ಇಲ್ಲದವರಿಗೆ ವಿಟಮಿನ್ ಸಿ ಮಾತ್ರೆ(ಚೀಪಬಹುದು) ಬೆಳಗ್ಗೆಯಂತೆ 10 ದಿನ ಮಾತ್ರ ಸೇವಿಸಬಹುದು. ಬಿ ಕಾಂಪ್ಲೆಕ್ಸ್ ಮಾತ್ರೆ(ನುಂಗುವುದು). ಬೆಳಗ್ಗೆಯಂತೆ 10 ದಿನ ಮಾತ್ರ ಸೇವಿಸಬಹುದು.
ರೋಗಲಕ್ಷಣ ಇರುವವರಿಗೆ ಪ್ಯಾರಾಸಿಟಮಲ್ (650ಗ್ರಾಂ) ಬೆಳಗ್ಗೆ-ರಾತ್ರಿ ಸೇವನೆ ಮಾಡಬೇಕು. ಆಜಿಮ್ ಟ್ಯಾಬಲೆಟ್ಸ್ 500 ಎಂಜಿ ಬೆಳಗ್ಗೆ ಮಾತ್ರ 3 ದಿನ ನಿರಂತರವಾಗಿ ಸೇವಿಸಬೇಕು. ಸಿಪಿಎಂ 4 ಎಂಜಿ ಟ್ಯಾಬಲೆಟ್ಸ್ ಮೂರು ದಿನ ರಾತ್ರಿ ಸೇವನೆ ಮಾಡಬೇಕು.