ಮೇಘನಾ ರಾಜ್ ಹುಟ್ಟುಹಬ್ಬ – ತಂದೆ ಫೋಟೋ ಜೊತೆ ಮಗನ ಭಾವನಾತ್ಮಕ ವಿಡಿಯೋ ಹಂಚಿಕೊಂಡ ನಟಿ
ಬೆಂಗಳೂರು: ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ದುಃಖದಿಂದ ಈವರೆಗೂ ಮೇಘನಾ ರಾಜ್ ಹೊರಬಂದಿಲ್ಲ. ಆಗಾಗ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪತಿ ಚಿರು ನೆನೆದು ಭಾವನಾತ್ಮಕ ಫೋಟೋಗಳು ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಇರುತ್ತಾರೆ. ಜೊತೆಗೆ ಮಗುವಿನ ಮುದ್ದಾದ ವಿಡಿಯೋಗಳು ಕ್ಯೂಟ್ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಇಂದು ಮೇಘನಾ ರಾಜ್ ಅವರ ಹುಟ್ಟುಹಬ್ಬ .. ಇಂದು ತಮ್ಮ ಮಗ ಜ್ಯೂನಿಯರ್ ಚಿರುವಿನ ವೀಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ನಟಿ ಮೇಘನಾ ರಾಜ್ ಮಗನನ್ನು ಎತ್ತಿಕೊಂಡು ಚಿರಂಜೀವಿ ಸರ್ಜಾ ಫೋಟೋವನ್ನು ತೋರಿಸಿ, ಅಪ್ಪನನ್ನು ನೋಡು ಎಂದು ಹೇಳುತ್ತಾರೆ. ಆಗ ಜ್ಯೂನಿಯರ್ ಚಿರು ಫೋಟೋದಲ್ಲಿ ಚಿರಂಜೀವಿ ಸರ್ಜಾರನ್ನು ನೋಡುತ್ತಾ, ತನ್ನ ಎರಡು ಕೈಗಳಿಂದ ಫೋಟೋವನ್ನು ಮುಟ್ಟಿ ಮುಗುಳುನಗೆ ಬೀರಿ, ಅಪ್ಪನ ಫೋಟೋದೊಂದಿಗೆ ಆಟ ಆಡಿದ್ದಾನೆ.
ಈ ವೀಡಿಯೋಗೆ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ, ಪನ್ನಾಗಭರಣ, ಕಿರುತರೆ ನಟಿ ಶ್ವೇತ ಚೆಂಗಪ್ಪ ಸೇರಿದಂತೆ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಸಹ ಈ ವಿಡಿಯೋ ನೋಡಿ ಕಮೆಂಟ್ ಗಳ ಸುರಿಮಳೆಗೈದಿದ್ಧಾರೆ. ಮಗುವಿನ ಮುದ್ದಾದ ವಿಡಿಯೋಗೆ ಮನಸೋತಿದ್ದಾರೆ.
https://www.instagram.com/p/COX8mliFuXY/?utm_source=ig_embed