ಮೇಕೆದಾಟು ಪಾದಯಾತ್ರೆ ಎಫೆಕ್ಟ್ : ಕೋಲಾರದ ಪೊಲೀಸ್ ಪೇದೆಗಳಿಗೆ ಕೊರೊನಾ Mekedatu padayatra saaksha tv
ಕೋಲಾರ : ಮೇಕದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸಿದ್ದ ಪಾದಯಾತ್ರೆಯ ಬಂದೋಬಸ್ತ್ ಗೆ ಹೋಗಿದ್ದ ಕೋಲಾರದ ನಾಲ್ಕು ಪೊಲೀಸ್ ಪೇದೆಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮುಳಬಾಗಿಲು ನಗರಠಾಣೆ, ಕೋಲಾರ ನಗರಠಾಣೆ, ಮಾಸ್ತಿ, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಠಾಣೆಯ ಇತರೆ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.
ಕೋಲಾರ ನಗರದ ಟ್ರಾಫಿಕ್ ಪೊಲೀಸ್ ಠಾಣೆಯಿಂದ 18 ಮಂದಿ ಪಾದಯಾತ್ರೆ ಬಂದೋಬಸ್ತ್ ಗೆ ತೆರಳಿದ್ದರು.
ಸದ್ಯ ನಾಲ್ಕು ಪೇದೆಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನುಳಿದವರ ಕೋವಿಡ್ ಟೆಸ್ಟ್ ಫಲಿತಾಂಶ ಬರಲಿದ್ದು, ಕೋವಿಡ್ ಕೇಸ್ ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.