ದಂಪತಿಯನ್ನು ಬಂಧಿಸಿ, 1 ತಿಂಗಳ ಮಗುವನ್ನು ಮಾರಿದ ಮೀಟರ್ ಬಡ್ಡಿ ಕುಳಗಳು..!
ಧಾರವಾಡ : ಮೀಟರ್ ಬಡ್ಡಿ ಲೆಕ್ಕಾಚಾರದಲ್ಲಿ ಬಡ ಜನರಿಂದ ದುಡ್ಡು ಫಿಕುತ್ತಿದ್ದ ಗ್ಯಾಂಗ್ ಒಂದು ಧಾರವಾಡದಲ್ಲಿ ಸಿಕ್ಕಿಬಿದ್ದಿದೆ. 6 ಜನರನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೀಟರ್ ಬಡ್ಡಿ ದಂಧೆ ಮಾಡುವ ನಾಲ್ವರು ಆರೋಪಿಗಳು ಧಾರವಾಡದ ದಂಪತಿಗೆ ಬಡ್ಡಿ ಸಾಲ ನೀಡಿದ್ದರು. ಆ ಸಾಲ ಮರಳಿಸುವಂತೆ ಪೀಡಿಸಿದ ಆರೋಪಿಗಳು, ಸಾಲ ಪಡೆದ ದಂಪತಿಯನ್ನು ಅಕ್ರಮ ಬಂಧನದಲ್ಲಿ ಇಟ್ಟಿದ್ದರು.
ವಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮೋದಿ ಫೋಟೋ ಬೇಕಾ..?
ದಂಪತಿ ಮೇಲೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿದ್ದಾರೆ. ಸಾಲದ್ದಕ್ಕೆ ದಂಪತಿಯ 1 ತಿಂಗಳ ಗಂಡು ಮಗುವನ್ನು 2.50 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದು ಮಗುವನ್ನೂ ರಕ್ಷಣೆ ಮಾಡಿದ್ದಾರೆ. ರಮೇಶ್ ಮಂಜುನಾಥ ವಾಲ್ಮೀಕಿ, ಭಾರತಿ ಮಂಜುನಾಥ ವಾಲ್ಮೀಕಿ, ರವಿ ಭೀಮಸೇನ ಹೆಗಡೆ, ವಿನಾಯಕ ಅರ್ಜುನ ಮಾದರ ಮೀಟರ್ ಬಡ್ಡಿ ಕುಳಗಳಾಗಿದ್ದು ಇವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಮಗುವನ್ನ ಖರೀದಿ ಮಾಡಿದ ಉಡುಪಿಯ ವಿಜಯ ನೆಗಳೂರ ಮತ್ತು ಚಿತ್ರಾ ನೆಗಳೂರ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಮಗುವನ್ನು ವಾಪಸ್ ಕೊಡಿಸಿ ಎಂದು ದಂಪತಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಮಾರಾಟವಾಗಿದ್ದ ಮಗುವನ್ನು ರಕ್ಷಣೆ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.