MI VS RCB : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ … RCB 64/3
ಮಹಿಳಾ ಪ್ರೀಮಿಯರ್ ಲೀಗ್ನ 19ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಇಂದು ಡಬಲ್ ಹೆಡರ್ ದಿನವಾಗಿದ್ದು, 3.30 ರಿಂದ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡನೇ ಪಂದ್ಯ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ.
RCB ಮೊದಲ ಹನ್ನೆರಡು ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿದೆ. ಕನಿಕಾ ಅಹುಜಾ ಮತ್ತು ಎಲ್ಲಿಸ್ ಪೆರ್ರಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಸೋಫಿ ಡಿವೈನ್ ಈ ಬಾರಿ ಖಾತೆ ತೆರೆಯದೇ ರನೌಟ್ ಆಗಿದ್ದಾರೆ. ಸ್ಮೃತಿ ಮಂದಾನ ಮತು ಹಿದರ್ ನೈಟ್ ವಿಕೆಟ್ ಒಪ್ಪಿಸಿದ್ದಾರೆ.
WPL ನಲ್ಲಿ ಮುಂಬೈ ಅದ್ಭೂತ ಪ್ರದರ್ಶನ ತೋರಿಸಿದೆ. ಆಡಿರುವ ಪಂದ್ಯಗಳಲ್ಲಿ 5 ರಲ್ಲಿ ಗೆದ್ದು 2 ರಲ್ಲಿ ಮಾತ್ರ ಸೋತಿದೆ. ಬೆಂಗಳೂರು ಐದು ಪಂದ್ಯಗಳಲ್ಲಿ ಸೋತು ಕೊನೆಯ ಎರಡರಲ್ಲಿ ಗೆದ್ದಿದ್ದು ಪ್ಲೇ ಆಫ್ ನಿಂದ ಹೊರಬಿದ್ದಿದೆ. ಇದೀಗ ಲೀಗನ ಕೊನೆಯ ಪಂದ್ಯವನ್ನ ಗೆಲುವಿನ ಮೂಲಕ ಕೊನೆಗೊಳಿಸುವ ಇರಾದೆಯನ್ನ ಆರ್ ಸಿ ಬಿ ಹೊಂದಿದೆ.
ಪ್ಲೇಯಿಂಗ್ ಇಲೆವನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ಸಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಾಕ್), ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಸೋಭಾನಾ ಆಶಾ ಮತ್ತು ಪ್ರೀತಿ ಬೋಸ್.
ಮುಂಬೈ ಇಂಡಿಯನ್ಸ್: ಹರ್ಮನ್ಪ್ರೀತ್ ಕೌರ್ (ಸಿ), ಯಾಸ್ತಿಕಾ ಭಾಟಿಯಾ (ವಾಕ್), ಹೇಲಿ ಮ್ಯಾಥ್ಯೂಸ್, ನಟಾಲಿ ಸಿವರ್ ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಹುಮೈರಾ ಖಾಜಿ, ಇಸಾಬೆಲ್ ವಾಂಗ್, ಅಮನ್ಜೋತ್ ಕೌರ್, ಜಿಂಟಿಮಣಿ ಕಲಿತಾ ಮತ್ತು ಸೈಕಾ ಇಶಾಕ್.
MI VS RCB : Mumbai bowling choice winning the toss … RCB 64/3