Michael Vaughn | ಇಂಗ್ಲೆಂಡ್ ಗೆ ಕಷ್ಟ.. ಟೀಂ ಇಂಡಿಯಾದೇ ಗೆಲುವು
257 ರನ್ ಗಳ ಗುರಿ ಅಂದ್ರೆ ಗೆಲುವು ಸ್ವಲ್ಪ ಕಷ್ಟ. ಗುರಿ ಮುಟ್ಟಬೇಕು ಅಂದ್ರೆ ಇಂಗ್ಲೆಂಡ್ ತಂಡ ಸಾಕಷ್ಟು ಕಷ್ಟ ಪಡಬೇಕು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ, ಕಾಮೆಂಟೇಟರ್ ಮೈಖನ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ – ಟೀಂ ಇಂಡಿಯಾ ನಡುವಿನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 416 ರನ್ ಗಳಿಗೆ ಆಲೌಟ್ ಆಗಿತ್ತು.
ಇಂಗ್ಲೆಂಡ್ ತಂಡ 284 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು.
ಇನ್ನು ದ್ವಿತಿಯ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಪೂಜಾರಾ ಅರ್ಧಶತಕದ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ.

ಇದರೊಂದಿಗೆ ಟೀಂ ಇಂಡಿಯಾ ಸದ್ಯ 257 ರನ್ ಗಳ ಮುನ್ನಡೆಯಲ್ಲಿದೆ.
ಈ ಹಿನ್ನೆಲೆಯಲ್ಲಿ ಕ್ರಿಕ್ ಬಜ್ ಜೊತೆ ಮಾತನಾಡಿರುವ ಮೈಖಲ್ ವಾನ್, ಇಂತಹ ಪಿಚ್ ನಲ್ಲಿ 139 ಎಸೆತಗಳನ್ನು ಎದುರಿಸಿ 50 ರನ್ ಗಳಿಸೋದು ಸುಲಭದ ಕೆಲಸವಲ್ಲ.
ಪೂಜಾರಾ ಬ್ಯಾಟಿಂಗ್ ಮಾಡುತ್ತಿರುವ ರೀತಿ ಅಮೋಘ. ಪೂಜಾರಾ, ಪಂತ್ ರಂತಹ ಆಟಗಾರರಿದ್ದರೇ ಎದುರಾಳಿ ತಂಡಕ್ಕೆ ಗೆಲುವು ಕಷ್ಟ ಸಾಧ್ಯ.
ಈಗ 257 ರನ್ ಗಳ ಮುನ್ನಡೆಯಲ್ಲಿರುವ ಟೀಂ ಇಂಡಿಯಾ ಇನ್ನೂ 150 ರನ್ ಗಳನ್ನು ಈಜಿಯಾಗಿ ಗಳಿಸಲಿದೆ. ಆಗ ಟಾರ್ಗೆಟ್ 400ರ ಗಡಿ ದಾಟಲಿದೆ.
ಇನ್ನುಳಿದಿರೋದು ಕೇವಲ ಎರಡು ದಿನಗಳ ಆಟ ಮಾತ್ರ. ಇಂಗ್ಲೆಂಡ್ ತಂಡ ಗೆಲ್ಲಬೇಕಾದ್ರೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂದು ವಾನ್ ಹೇಳಿದ್ದಾರೆ.