ಜೆರೂಸಲೆಮ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ಮಧ್ಯೆ ಯುದ್ಧ ಮುಂದುವರೆದಿದೆ. ಇಸ್ರೇಲ್ ಉಗ್ರರ ಸದ್ದಡಗಿಸಲು ಟೊಂಕಕಟ್ಟಿ ನಿಂತಿದೆ. ಈ ಮಧ್ಯೆ ಹಮಾಸ್ ನಡೆಸಿದ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ತನಿಖೆ ನಡೆಸಲು ಮುಂದಾಗಿದೆ.
ಹಮಾಸ್ ಉಗ್ರರು ದಾಳಿ ನಡೆಸಿದ ನಂತರ ಮಹಿಳೆ, ಮಕ್ಕಳು ಸೇರಿದಂತೆ ಅನೇಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದು, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇಸ್ರೇಲ್ ಪೊಲೀಸರು ವಿಧಿವಿಜ್ಞಾನ ಸಾಕ್ಷ್ಯಗಳು, ವೀಡಿಯೊಗಳು, ಸಾಕ್ಷಿಗಳ ಸಾಕ್ಷ್ಯ ಮತ್ತು ಶಂಕಿತರ ವಿಚಾರಣೆ ದಾಖಲಾತಿಗಾಗಿ ಬಳಸುತ್ತಿದ್ದಾರೆ.
ದೈಹಿಕವಾಗಿಯೂ ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ.ಇಸ್ರೇಲಿ ಪೊಲೀಸರು 60 ಸಾವಿರಕ್ಕೂ ಹೆಚ್ಚು ವಿಡಿಯೋಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಸಾವಿರಕ್ಕೂ ಅಧಿಕ ಹೇಳಿಕೆ ಹಾಗೂ 60 ಸಾವಿರಕ್ಕೂ ಅಧಿಕ ವಿಡಿಯೋ ತುಣುಕು ಸಂಗ್ರಹಿಸಿದ್ದೇವೆ ಎಂದು ಇಸ್ರೇಲ್ ಹೇಳಿದೆ.