ಕಿಚ್ಚ ಸುದೀಪ್ ಅವರ ಖುಷಿಗೆ ಪಾರವೇ ಇಲ್ಲ. ಬಹುನಿರೀಕ್ಷಿತ ಕೋಟಿಗೊಬ್ಬ -3 ಚಿತ್ರ ಸಕತ್ ಸೌಂಡ್ ಮಾಡುತ್ತಿದೆ.
ವಿವಾದದ ನಡುವೆಯೂ ಕೋಟಿಗೊಬ್ಬ -3 ಚಿತ್ರ ಒಂದು ದಿನ ತಡವಾಗಿ ಬಿಡುಗಡೆಯಾಗಿತ್ತು. ಹೀಗಾಗಿ ಸುದೀಪ್ ಅಭಿಮಾನಿಗಳು ಸಾಕಷ್ಟು ನಿರಾಸೆ ಮತ್ತು ಸಿಟ್ಟು ಮಾಡಿಕೊಂಡಿದ್ದರು.
ಆದ್ರೆ ಚಿತ್ರದ ಕಲೆಕ್ಷನ್ ಬಗ್ಗೆ ಕಿಚ್ಚ ಸುದೀಪ್ ಅವರು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೋಟಿಗೊಬ್ಬ -3 ಚಿತ್ರ ಬಾಕ್ಸಾಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಜಸ್ಟ್ ನಾಲ್ಕು ದಿನದಲ್ಲಿ 40.5 ಕೋಟಿ ಕಲೆಕ್ಷನ್ ಆಗಿದೆ. ತೆಲುಗಿನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ.
ಒಟ್ಟಿನಲ್ಲಿ ಕೋಟಿಗೊಬ್ಬ-3 ಚಿತ್ರ ತಂಡಕ್ಕೆ ಈಗ ಸ್ವಲ್ಪ ಮಟ್ಟಿನ ರಿಲೀಫ್ ಸಿಕ್ಕಿದೆ. ವಿವಾದ, ಅಡೆತಡೆಯ ನಡುವೆ ಚಿತ್ರ ನಿರೀಕ್ಷೆಗಿಂತಲೂ ಹೆಚ್ಚು ಕಲೆಕ್ಷನ್ ಮಾಡುತ್ತಿರುವುದು ನಿರ್ಮಾಪಕರಿಗೂ ಖುಷಿ ತಂದಿದೆ.
ಅಮೇಜಾನ್ ಪ್ರೈಮ್ ನಲ್ಲಿ ಕನ್ನಡದ ‘ಮರ್ಯಾದೆ ಪ್ರಶ್ನೆ’
ಒಂದಷ್ಟು ಅನುಭವಿ ತಂಡ ಸೇರಿಕೊಂಡು ಮರ್ಯಾದೆ ಪ್ರಶ್ನೆ ಎಂಬ ಒಂದೊಳ್ಳೆ ಕಂಟೆಂಟ್ ಸಿನಿಮಾವನ್ನು ಪ್ರೇಕ್ಷಕರ ಎದುರು ಹರವಿಟ್ಟಿದ್ದಾರೆ. ಕಳೆದ ನವೆಂಬರ್ 22ರಂದು ಚಿತ್ರಮಂದಿರಕ್ಕೆ ಬಂದ ಈ ಚಿತ್ರ...