ಮಿಸ್ ಯೂನಿವರ್ಸ್ 2021ರ ಕಿರೀಟ ಧರಿಸಿದ ಆಂಡ್ರಿಯಾ – ಟಾಪ್ 5 ನಲ್ಲಿ ಮಂಗಳೂರಿನ ಚೆಲುವೆ
2021ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟವನ್ನ ಮೆಕ್ಸಿಕೊದ ಸುಂದರಿ ಆಂಡ್ರಿಯಾ ಮೆಜಾ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿ ನಡೆದ 69ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಬಂದಿದ್ದ 73 ಸ್ಪರ್ಧಿಗಳ ಜೊತೆ ಸ್ಪರ್ಧಿಸಿದ್ದ ಆಂಡ್ರಿಯಾ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಅವರಿಗೆ 2020ರ ಮಿಸ್ ಯೂನಿವರ್ಸ್ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ ಕಿರೀಟ ಧಾರಣೆ ಮಾಡಿದರು. ಅಂದ್ಹಾಗೆ ಈ ಸ್ಪರ್ಧೆಯಲ್ಲಿ ಟಾಪ್ 5 ನಲ್ಲಿ ಭಾರತದ ಅದ್ರಲ್ಲೂ ಮಂಗಳೂರಿನ ಚೆಲುವೆ ಸ್ಥಾನ ಪಡೆದಿದ್ದಾರೆ. ಕರಾವಳಿ ಬೆಡಗಿ ಆಡ್ಲೈನ್ ಕ್ಯಾಸ್ಟೆಲಿನೊ ಆಂಡ್ರಿಯಾಗೆ ಟಫ್ ಕಾಂಪಿಟೇಶನ್ ನೀಡಿದ್ದಾರೆ. ಆದ್ರೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ.
ಆಡ್ಲೈನ್ ಕ್ಯಾಸ್ಟೆಲಿನೊ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಬಾರಿ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಮೂರನೇ ರನ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಆಂಡ್ರಿಯಾ ಮೆಜಾ ಈ ಬಾರಿ ಗೆಲ್ಲುವ ಮೂಲಕ , ಕಿರೀಟ ಗೆದ್ದ ಮೆಕ್ಸಿಕೊದ 3ನೇ ಸುಂದರಿ ಎನಿಸಿಕೊಂಡಿದ್ದಾರೆ. ಆಂಡ್ರಿಯಾ ಮೆಜಾ ಮಾಡಲಿಂಗ್ ಜೊತೆಗೆ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.