ಬಾಂಗ್ಲಾ ನಟಿ ಮೃತದೇಹ ಗೋಣಿ ಚೀಲದಲ್ಲಿ ಪತ್ತೆ…

1 min read

ಬಾಂಗ್ಲಾ ನಟಿ ಮೃತದೇಹ ಗೋಣಿ ಚೀಲದಲ್ಲಿ ಪತ್ತೆ.

ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಶಿಮು ಅವರ ಮೃತ ದೇಹವ  ಢಾಕಾ ನಗರ  ಹೊರವಲಯದ ನಿರ್ಜನ ಪ್ರದೇಶದಲ್ಲಿ ಗೋಣಿ ಚೀಲದೊಳಗೆ ಪತ್ತೆಯಾಗಿದೆ.

 ಬಾಂಗ್ಲಾದೇಶದ ಕೆರಾನಿಗಂಜ್‌ನಲ್ಲಿರುವ ಹಜರತ್‌ಪುರ್ ಸೇತುವೆಯ ಮೇಲೆ ರೈಮಾ ಅವರ ಮೃತದೇಹವು ಗೋಣಿ ಚೀಲದಲ್ಲಿ ಪತ್ತೆಯಾಗಿದೆ.ಕಳೆದ ಎರಡು ಮೂರು ದಿನಗಳಿಂದ ನಾಪತ್ತೆಯಾಗಿರುವ ಕುರಿತು ರೈಮಾ ಅವರ ಪತಿ ಠಾಣೆಗೆ ದೂರು ನೀಡಿದ್ದರು.

ರೈಮಾ ಮೃತ ದೇಹದ ಮೇಲೆ ಹಲವು ಗಾಯದ ಗುರುತು ಪತ್ತೆಯಾಗಿದ್ದು ಯಾರೋ ಕೊಲೆ ಮಾಡಿ ಸೇತುವೆಯ ಬಳಿ ಎಸೆದು ಹೋಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

“ಅವರ ಮೃತ ದೇಹವನ್ನು ಮಿಟ್‌ಫೋರ್ಡ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ” ಎಂದು ಕೆರಾನಿಗಂಜ್ ಮಾಡೆಲ್ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ರೈಮಾ ಅವರ ಪತಿ ಹಾಗೂ ಅವರ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಟಿ ರೈಮಾ ಶಿಮು  ಅವರು 1998 ರಲ್ಲಿ ಕಾಜಿ ಹಯಾತ್ ಅವರ ಬರ್ತಮನ್ ಎಂಬ ಚಲನಚಿತ್ರದೊಂದಿಗೆ ಪಾದಾರ್ಪಣೆ ಮಾಡಿದ್ದರು.  ಸುಮಾರು 25ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd