ಕಣ್ಮರೆಯಾಗಿದ್ದ ಚೀನಾ ದೇಶದ ಟೆನ್ನೀಸ್ ಆಟಗಾರ್ತಿ ದಿಢೀರ್ ಪ್ರತ್ಯಕ್ಷ
ಚೀನಾ ದೇಶದ ಪ್ರಭಾವಿ ಕಮ್ಯೂನಿಸ್ಟ್ ನಾಯಕ ವೈಸ್ ಪ್ರೀಮಿಯರ್ ಜಾಂಗ್ ಗೌಲಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಮೇಲೆ ಕಣ್ಮರೆಯಾಗಿದ್ದ ಚೀನಾದ ಸ್ಟಾರ್ ಟೆನ್ನೀಸ್ ಆಟಗಾರ್ತಿ ಪೆಂಗ್ ಶುವಾಯ್ ಪತ್ತೆಯಾಗಿದ್ದಾರೆ ಎಂದು ಚೀನಾ ದೇಶದ ಪತ್ರಿಕೆ ವರದಿಮಾಡಿದೆ.
ಚೀನಾ ದೇಶದ ಗ್ಲೋಬಲ್ ಟೈಮ್ಸ್ ಪತ್ರಿಕೆ ಈ ಬಗ್ಗೆ ವಿಚಾಟ್ ಶೋಶಿಯಲ್ ಮೀಡಿಯಾದಲ್ಲಿ ಪೋಟೋಗಳನ್ನ ಬಿಡುಗಡೆ ಮಾಡಿದ್ದು, ಟೆನ್ನೀಸ್ ಆಟಗಾರ್ತಿ ಮನೆಯಲ್ಲಿ ಅರಾಮಾಗಿ ಇದ್ದಾರೆ, ತಮ್ಮ ಇಷ್ಟದ ಸಾಕು ಪ್ರಾಣಿ ಬೆಕ್ಕು ಮತ್ತು ಗೊಂಬೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಪೋಸ್ಟ್ ಮಾಡಿದೆ.
35 ವರ್ಷದ ಟೆನ್ನೀಸ್ ತಾರೆ ಪೆಂಗ್ ಶುವಾಯ್ ಚೀನಾದ ಮಾಜಿ ವೈಸ್ ಪ್ರೀಮಿಯರ್ ಕಮ್ಯೂನಿಸ್ಟ್ ನಾಯಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ನಂತರ್ ದಿಢೀರ್ ಎಂದು ಕಣ್ಮೆರೆಯಾಗಿದ್ದರು. ಅವರು ಕಿರುಕುಳದ ವಿಷಯನ್ನ ಪೋಸ್ಟ್ ಮಾಡಿದ ಅರ್ಧ ಗಂಟೆಯಲ್ಲೆ ಅವರ ಎಲ್ಲ ಪೋಸ್ಟ್ಗಳನ್ನ ಸೆನ್ಸಾರ್ ಮಾಡಿ ಡಿಲೀಟ್ ಮಾಡಲಾಗಿತ್ತು.
ಆಟಗಾರ್ತಿ ಕಣ್ಮರೆಯಾದ ನಂತರ ಟೆನ್ನೀಸ್ ಜಗತ್ತು ಅವರ ಇರುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸತ್ತು. ಸೆರೆನಾ ವಿಲಿಯಮ್ಸ್, ನವೊಮಿ ಒಸಾಕ, ನೊವಾಕ್ ಜೋಕೋವಿಚ್ ಸೇರಿದಂತೆ ಘಟಾನುಘಟಿ ಆಗಾರರು ಟ್ವೀಟ್ ಮಾಡಿ ಪೆಂಗ್ ಶುವಾಯ್ ಕುರಿತಂತೆ ಆತಂಕ ವ್ಯಕ್ತ ಪಡಿಸಿದ್ದರು.