ಆಂದ್ರಪ್ರದೇಶ ಸಿಎಂ ಪೋಟೋ ದುರ್ಬಳಕೆ ಮಾಡಿ ಗಾಂಜಾ ಮಾರುತ್ತಿದ್ದ ಆರೋಪಿಗಳು Saaksha Tv
ಬೆಂಗಳೂರು: ಆಂದ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪೋಟೋಗಳನ್ನು ಬಳಸಿಕೊಂಡು ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದವರನ್ನು ಬೆಂಗಳೂರು ಪೋಲಿಸರು ಬಂಧಿಸಿದ್ದಾರೆ.
ಆಂದ್ರಪ್ರದೇಶದ ಚಿತ್ತೂರು ಮೂಲದ ಕುಮಾರ್ (34), ಶಿವಪ್ರಕಾಶ್ (35), ಪ್ರಕಾಶ್ ರಾವ್ (32) ಮೂವರು ಆರೋಪಿಗಳು ರಾಷ್ಟ್ರೀಯ ಬಾಲ ಸುರಕ್ಷಾ ಇಲಾಖೆಯ ಚಿಹ್ನೆ ಹಾಗೂ ಆಂಧ್ರಪ್ರದೇಶ ಮುಂಖ್ಯಮಂತ್ರಿ ಅವರ ಪೋಟೋಗಳನ್ನು ಬುಲೆರೋ ವಾಹನಕ್ಕೆ ಅಂಟಿಸಿ ಆಂದ್ರದಿಂದ ಬೆಂಗಳೂರಿಗೆ ಗಾಂಜಾ ತರುದ್ದಿದ್ದರು.
ಫೆಬ್ರವರಿ 2 ರಂದು ಬೆಂಗಳೂರಿನ ಸಂಜಯ್ ನಗರದ ಪಾರ್ಕ್ ವೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕುಮಾರ್ ನ್ನು ಬಂದಿಸಲಾಗಿತ್ತು. ಈತನ ವಿಚಾರಣೆ ವೇಳೆ ಇತರೆ ಇಬ್ಬರು ಆರೋಪಿಗಳ ಬ್ಗಗೆ ಮಾಹಿತಿ ನೀಡಿದ್ದ. ಈ ಸುಳಿವಿನ ಮೆರೆಗೆ ಬಳ್ಳಾರಿ ಮುಖ್ಯ ರಸ್ತೆಯ ಸಿಬಿಐ ಬಸ್ ನಿಲ್ದಾಣದ ಸಮೀಪದಲ್ಲಿ ನಿಂತಿದ್ದ ಶಿವ ಪ್ರಕಾಶ್ ಮತ್ತು ಪ್ರಕಾಶ್ ರಾವ್‌ನನ್ನು ಬಂಧಿಸಲಾಗಿದೆ.
ಬಂಧಿತ ವೇಳೆ ಬುಲೆರೋ ಜೀಪ್‌ನಲ್ಲಿ ಸಂಗ್ರಹಿಸಿಟ್ಟಿದ್ದ 103 ಕೆ.ಜಿ. ಗಾಂಜಾ ಸೊಪ್ಪನ್ನು ಜಪ್ತಿ ಮಾಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಪ್ರಭಾವಿ ವ್ಯಕ್ತಿಯೊಬ್ಬ ಆರೋಪಿಗಳನ್ನು ಬಳಸಿಕೊಂಡು ಕರ್ನಾಟಕ, ತಮಿಳುನಾಡಿಗೆ ನಿರಂತರವಾಗಿ ಗಾಂಜಾ ಪೂರೈಕೆ ಮಾಡುವುದು ತನಿಖೆಯಲ್ಲಿ ತಿಳಿದು ಬಂದಿದೆ. ಆತನಿಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ವಿನಾಯಕ್ ಪಾಟೀಲ್ ಹೇಳಿದ್ದಾರೆ.









