ಕಲಬುರಗಿ : ಶಾಸಕರ ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಂಗ್ರೆಸ್ ಶಾಸಕ (Congress MLA) ಎಂ.ವೈ. ಪಾಟೀಲ್ (MY Patil) ಅವರು ತೆರಳುತ್ತಿದ್ದ ಕಾರು ಅಪಘಾತವಾಗಿದೆ.
ಶಾಸಕರ ಕಾರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದ ಹತ್ತಿರ ಅಪಘಾತ ಸಂಭವಿಸಿದೆ. ಆದರೆ, ಘಟನೆಯಲ್ಲಿ ಅದೃಷ್ಟವಶಾತ್ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೇವರ್ಗಿ (ಬಿ) ಗ್ರಾಮದ ಹೊರವಲಯದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ತಗ್ಗುಗುಂಡಿಗೆ ಬಿದ್ದಿದೆ. ಘಟನೆ ವೇಳೆ ಶಾಸಕರು ಹಾಗೂ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಶಾಸಕರ ಪುತ್ರ ಡಾ. ಸಂಜೀವ್ ಪಾಟೀಲ್ ಅವರ ಶಾಂತಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.








