ಸಿ-295 ವಿಮಾನ ತಯಾರಿಕಾ ಘಟಕಕ್ಕೆ ಮೋದಿ ಶಂಕುಸ್ಥಾಪನೆ..
ದೇಶದ ಖಾಸಗಿ ವಲಯದಲ್ಲಿ ಮೊದಲ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನು ಟಾಟಾ-ಏರ್‌ಬಸ್ ಕನ್ಸೋರ್ಟಿಯಂ ಸ್ಥಾಪಿಸುತ್ತಿದೆ. ಇದು ಸ್ವಾವಲಂಬಿ ಭಾರತ (ಆತ್ಮನಿರ್ಭರ ಭಾರತ) ಕಡೆಗೆ ಮತ್ತೊಂದು ಹೆಜ್ಜೆ ಎಂದು ಬಿಜೆಪಿ ಮೂಲಗಳು ಬಣ್ಣಿಸಿವೆ.
ಭಾರತೀಯ ವಾಯುಪಡೆಯನ್ನ (ಐಎಎಫ್) ಆಧುನೀಕರಿಸುವ ಉದ್ದೇಶದಿಂದ ಇಲ್ಲಿ ಕಂಪನಿಯನ್ನು ಸ್ಥಾಪಿಸಲಾಗುತ್ತಿದೆ. ಯೋಜನೆಗೆ ಅಂದಾಜು 21,935 ಕೋಟಿ ಬಂಡವಾಳ ಹೂಡಲಾಗುತ್ತಿದೆ. ಸಿ-295 ವಿಮಾನಗಳನ್ನು ಇಲ್ಲಿ ತಯಾರಿಸಲಾಗುತ್ತದೆ.
ಸಿ-295 ವಿಮಾನಕ್ಕಾಗಿ ಭಾರತ ಸರ್ಕಾರವು ಕಳೆದ ವರ್ಷ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 21,000 ಕೋಟಿ ವೆಚ್ಚದಲ್ಲಿ 56 ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಇವುಗಳಲ್ಲಿ 16 ವಿಮಾನಗಳು ಸ್ಪೇನ್‌ನಿಂದ ಬರಲಿವೆ. ಉಳಿದ 40 ವಿಮಾನಗಳನ್ನು ವಡೋದರಾದಲ್ಲಿ ಸ್ಥಾಪಿಸಲಾಗುತ್ತಿರುವ ಕಂಪನಿಯಲ್ಲಿ ತಯಾರಿಸಲಾಗುವುದು.
C-295 ವಿಮಾನವನ್ನು ಯುರೋಪಿನ ಹೊರಗೆ ತಯಾರಿಸುತ್ತಿರುವುದು ಇದೇ ಮೊದಲು.
Modi lays foundation stone for Airbus C-295 aircraft manufacturing unit.