ನವದೆಹಲಿ: ಮತ್ತೊಮ್ಮೆ ಜಾಗತಿಕ ಅಗ್ರ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರ ಸ್ಥಾನ ಪಡೆದಿದ್ದಾರೆ.
ಅಮೆರಿಕ ಮೂಲದ ‘ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್’ ಮಾರ್ನಿಂಗ್ ಕನ್ಸಲ್ಟ್ (Morning Consult) ಕೈಗೊಂಡಿದ್ದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಶೇ 76 ರಷ್ಟು ರೇಟಿಂಗ್ನೊಂದಿಗೆ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ. ಶೇ. 18 ರಷ್ಟು ಜನರು ಮಾತ್ರ ಅವರನ್ನು ತಿರಸ್ಕರಿಸಿದ್ದಾರೆ. ಶೇ. 6ರಷ್ಟು ಜನರು ಅಭಿಪ್ರಾಯ ತಿಳಇಸಿಲ್ಲ.
ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮೋದಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಶೇ. 64 ರಷ್ಟು ಮತ ಪಡೆದಿದ್ದಾರೆ. ಮೆಕ್ಸಿಕೊದ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಶೇ 61 ರಷ್ಟು ಬೆಂಬಲ ಪಡೆದಿದ್ದಾರೆ.