ಕರ್ನಾಟಕವನ್ನು ಕಾಂಗ್ರೆಸ್ ಗೂಂಡಾ ರಾಜ್ಯ ಮಾಡಲು ಹೊರಟಿದೆ : ಬಿಜೆಪಿ

1 min read
Congress padayatre bjp vs congress tweet war saaksha tv

ಕರ್ನಾಟಕವನ್ನು ಕಾಂಗ್ರೆಸ್ ಗೂಂಡಾ ರಾಜ್ಯ ಮಾಡಲು ಹೊರಟಿದೆ : ಬಿಜೆಪಿ bjp vs congress tweet war saaksha tv

ಬೆಂಗಳೂರು : ಕರ್ನಾಟಕವನ್ನು ಕಾಂಗ್ರೆಸ್  ಪಕ್ಷ ಗೂಂಡಾ ರಾಜ್ಯ ಮಾಡಲು ಹೊರಟಂತಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.

ರಕ್ಷಾ ರಾಮಯ್ಯ ಬೆಂಬಲಿಗನ ಮೇಲೆ ನಲಪಾಡ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರ ಗೂಂಡಾಗಿರಿ ಮತ್ತೆ ಆರಂಭಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಶಿಷ್ಯ ಮಹಮ್ಮದ್ ನಲಪಾಡ್‌ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್  ಪಕ್ಷ ಗೂಂಡಾ ರಾಜ್ಯ ಮಾಡಲು ಹೊರಟಂತಿದೆ ಎಂದು ಟೀಕಿಸಿದೆ.

bjp vs congress tweet war  saaksha tv

ಯುವ ಕಾಂಗ್ರೆಸ್ಸಿನ ನಿಯೋಜಿತ ಅಧ್ಯಕ್ಷ ನಲಪಾಡ್ ರೌಡಿಸಂ ಪ್ರಕರಣಗಳು ಇದೇ ಮೊದಲೇನಲ್ಲ. ಅಮಾಯಕ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ, ದಲಿತ ಕಾಂಗ್ರೆಸ್‌ ಕಾರ್ಯಕರ್ತೆಯೋರ್ವರಿಗೆ ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳು ಈ ಪುಡಿ ರೌಡಿಯ ಮೇಲಿದೆ. ಆದರೂ, ಕೆಪಿಸಿಸಿ ಅಧ್ಯಕ್ಷರು ಮೌನಕ್ಕೆ ಶರಣಾಗಿ‌ರುವುದೇಕೆ ಎಂದು ಪ್ರಶ್ನಿಸಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd