Mohammed Shami | ಪಾಕ್ ಬೌಲರ್ ಗೆ ಮೆಂಟರ್ ಆದ ಶಮಿ
ಟಿ 20 ವಿಶ್ವಕಪ್ ಭಾಗವಾಗಿ ನಡೆದ ಟೀಂ ಇಂಡಿಯಾ – ಆಸ್ಟ್ರೇಲಿಯಾ ನಡುವಿನ ವಾರ್ಮ್ ಅಪ್ ಮ್ಯಾಚ್ ನಲ್ಲಿ ಭಾರತ ಗೆಲುವು ಸಾಧಿಸಿದೆ.
ಟೀಂ ಇಂಡಿಯಾದ ಫಾಸ್ಟ್ ಬೌಲರ್ ಮೊಹ್ಮದ್ ಶಮಿ ಸೂಪರ್ ಕಮ್ ಬ್ಯಾಕ್ ಮಾಡಿದ್ರು.
ಆಸೀಸ್ ನ ಇನ್ನಿಂಗ್ಸ್ ಕೊನೆಯ ಓವರ್ ಮಾಡಿದ ಶಮಿ ಮೂರು ವಿಕೆಟ್ಸ್.. ಒಂದು ರನೌಟ್ ಒಟ್ಟಾಗಿ ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ ಗಳನ್ನು ತೆಗೆದು ಟೀಂ ಇಂಡಿಯಾಗೆ ಥ್ರಿಲ್ಲಿಂಗ್ ಗೆಲುವು ತಂದುಕೊಟ್ಟರು.
ಈ ಪಂದ್ಯದ ಬಳಿಕ ಸ್ಟೇಡಿಯಂನಲ್ಲಿ ಪಾಕಿಸ್ತಾನ್, ಇಂಗ್ಲೆಂಡ್ ವಾರ್ಮ್ ಆಪ್ ಮ್ಯಾಚ್ ನಡೆಯಬೇಕಾಯಿತು.
ಆ ಮ್ಯಾಚ್ ಆರಂಭಕ್ಕೂ ಮುನ್ನಾ ಶಮಿ.. ಪಾಕಿಸ್ಥಾನ್ ಸ್ಟಾರ್ ಶಾಹಿನ್ ಅಫ್ರಿದಿಗೆ ಕೆಲವು ಟಿಪ್ಸ್ ಗಳನ್ನು ನೀಡಿದರು.
ಬೌಲಿಂಗ್ ನಲ್ಲಿ ಅಫ್ರಿದಿಗೆ ಶಮಿ ಕೆಲವು ಸಲಹೆಗಳನ್ನು ನೀಡಿದರು. ರೈಟ್ ಹ್ಯಾಂಡರ್ ಆಗಿರುವ ಶಮಿ, ಅಫ್ರಿದಿಗಾಗಿ ಲೆಫ್ಟ್ ಹ್ಯಾಂಡ್ ಬೌಲಿಂಗ್ ಮಾಡಿದ್ರು.

ಈ ಸಂದರ್ಭದಲ್ಲಿ ಇವರಿಬ್ಬರಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಆಸೀಸ್ ವಿರುದ್ಧದ ಮೊದಲ ವಾರ್ಮ್ ಅಪ್ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಅರು ರನ್ ಗಳಿಂದ ಗೆಲುವು ಸಾಧಿಸಿದೆ.
ಪಂದ್ಯ ಗೆಲ್ಲಲು 187 ರನ್ ಗಳನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ, ಟೀಂ ಇಂಡಿಯಾದ ಸಾಂಘೀಕ ಪ್ರದರ್ಶನಕ್ಕೆ ತಲೆಬಾಗಿ 180 ರನ್ ಗಳಿಗೆ ಸರ್ವಪತನಗೊಂಡಿತು.
ಆ ಮೂಲಕ ಟೀಂ ಇಂಡಿಯಾ ಆರು ರನ್ ಗಳಿಂದ ಗೆಲುವಿನ ನಗೆ ಬೀರಿತು. ಅಂತಿಮ ಓವರ್ ನಲ್ಲಿ ಟೀಂ ಇಂಡಿಯಾದ ಬೌಲರ್ ಮೊಹ್ಮದ್ ಶಮಿ ಬೊಂಬಾಟ್ ಬೌಲಿಂಗ್ ಮಾಡಿ ಮೂರು ವಿಕೆಟ್ ಪಡೆದರು.
ಇದರ ಪರಿಣಾಮ ಟೀಂ ಇಂಡಿಯಾ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು.