ನವದೆಹಲಿ: ಅಪಘಾತಕ್ಕೆ ಈಡಾಗಿದ್ದ ವ್ಯಕ್ತಿಯನ್ನು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರು ರಕ್ಷಿಸಿ, ಮಾನವೀಯತೆ ಮೆರೆದಿದ್ದಾರೆ.
ನೈನಿತಾಲ್ ನಲ್ಲಿ ಈ ಘಟನೆ ನಡೆದಿದ್ದು, ವೀಡಿಯೋವನ್ನು ಶಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಶಮಿ ಸಂತ್ರಸ್ತರಿಗೆ ಸಹಾಯ ಮಾಡುವುದನ್ನು ಕಾಣಬಹುದು. ಅವನು ತುಂಬಾ ಅದೃಷ್ಟಶಾಲಿ. ದೇವರು ಅವನಿಗೆ 2ನೇ ಜೀವನ ಕೊಟ್ಟನು. ಅವರ ಕಾರು ನೈನಿತಾಲ್ ಹತ್ತಿರವಿರುವ ಬೆಟ್ಟದ ರಸ್ತೆಯಿಂದ ನನ್ನ ಕಾರಿನ ಮುಂದೆ ಬಿದ್ದಿತು. ಅವರನ್ನು ನಾವು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದೇವೆ. ಇಂದು ಒಬ್ಬರ ಜೀವವನ್ನು ರಕ್ಷಿಸಿದ ಖುಷಿ ನನಗಿದೆ ಎಂದು ಶಮಿ ಬರೆದುಕೊಂಡಿದ್ದಾರೆ.