ಭುವನೇಶ್ವರ: ಒಡಿಶಾದ (Odisha)ಲ್ಲಿ ಬಿಜೆಪಿ ಚೊಚ್ಚಲ ಬಾರಿಗೆ ಸರ್ಕಾರ ರಚಿಸಲು ಮುಂದಾಗಿದ್ದು, ಮೋಹನ್ ಚರಣ್ ಮಾಝಿ (Mohan Charan Majhi) ಅವರನ್ನು ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಜೂನ್ 12ರಂದು ಹೊಸ ಸರ್ಕಾರ ರಚನೆಯಾಗಲಿದೆ.
ಕೆ.ವಿ.ಸಿಂಗ್ದೇವ್ ಮತ್ತು ಪ್ರವತಿ ಪರಿದಾ ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಗೆಲುವು ಸಾಧಿಸಿರುವ ಮಾಝಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಘೋಷಿಸಿದ್ದಾರೆ.
ಇತ್ತೀಚೆಗೆ ನಡೆದಿದ್ದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಕಿಯೋಂಜಾರ್ ಕ್ಷೇತ್ರದಿಂದ ಮಾಝಿ ಗೆದ್ದಿದ್ದರು. ಒಡಿಶಾ ವಿಧಾನಸಭೆಯಲ್ಲಿ ಒಟ್ಟು 147 ಸ್ಥಾನಗಳಿದ್ದು, 78 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ ಹೀನಾಯ ಸೋಲು ಅನುಭವಿಸಿಸಿದ್ದಾರೆ. ಹೀಗಾಗಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ರಚಿಸುತ್ತಿದೆ. ಬಿಜೆಪಿಯ ಅಧಿಕಾರ ಪದಗ್ರಹಣ ಕಾರ್ಯಕ್ರಮ ಜೂನ್ 12ರಂದು ನಡೆಯಲಿದೆ.