Morbi bridge collapse : 4 ಲಕ್ಷದಿಂದ 8 ಲಕ್ಷಕ್ಕೆ ಪರಿಹಾರ ಹೆಚ್ಚಿಸಿ – ಸರ್ಕಾರಕ್ಕೆ ಗುಜರಾತ್ ಕೋರ್ಟ್ ತಾಕೀತು..
ಮೊರ್ಬಿ ತೂಗು ಸೇತುವೆ ದುರಂತದ ಪರಿಹಾರ ಮೊತ್ತವ ಪ್ರತಿ ಸಾವಿಗೆ 4 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸುವಂತೆ ಗುಜರಾತ್ ಹೈಕೋರ್ಟ್ ಸರ್ಕಾರವನ್ನ ಕೇಳಿದೆ. 4 ಲಕ್ಷ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ದುರಂತದಲ್ಲಿ ಗಾಯಗೊಂಡವರಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರವನ್ನು ಕೇಳಿದೆ.
ಸಂತ್ರಸ್ತರಿಗೆ ಪರಿಹಾರ ನೀಡಲು ಖಾಸಗಿ ದಾನಿಗಳಿಂದ ಸುಮಾರು 5 ಕೋಟಿ ರೂಪಾಯಿ ಪಡೆದಿರುವುದಾಗಿ ಹೈಕೋರ್ಟ್ಗೆ ತಿಳಿಸಲಾಗಿದೆ. ಪೋಷಕರಿಬ್ಬರನ್ನೂ ಕಳೆದುಕೊಂಡ ಏಳು ಮಕ್ಕಳಿಗೆ ತಲಾ 38 ಲಕ್ಷ ರೂಪಾಯಿ ಸಿಗಲಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಅಂತಹ ಮಕ್ಕಳಿಗೆ 18 ವರ್ಷ ವಯಸ್ಸಾಗುವವರೆಗೆ ಮಾಸಿಕ ರೂ 3,000 ಭತ್ಯೆ ನೀಡುವ ಸರ್ಕಾರದ ಯೋಜನೆಯ ಬಗ್ಗೆಯೂ ಹೈಕೋರ್ಟ್ ತಕರಾರು ತೆಗೆದಿದ್ದ, ಇದು ತುಂಬಾ ಕಡಿಮೆ ಮೊತ್ತವಾಯಿತು. ಪುಸ್ತಕಗಳು ಮತ್ತು ಸಮವಸ್ತ್ರಗಳ ವೆಚ್ಚವನ್ನು ಪೂರೈಸಲು ಕಷ್ಟವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
ಗುಜರಾತ್ನ ಮೊರ್ಬಿಯಲ್ಲಿ ಮಚ್ಚು ನದಿಯ ಮೇಲೆ ಸುಮಾರು 100 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆ ಅಕ್ಟೋಬರ್ 30 ರಂದು ಕುಸಿದು 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
Morbi bridge collapse :Increase Morbi Relief From Rs 4 Lakh To Rs 10 Lakh, Gujarat HC To Government