ಬಾಗಲಕೋಟೆ: ಸಹಕಾರಿ ಬ್ಯಾಂಕ್ ನಲ್ಲಿ 10 ಕೋಟಿ ರೂ.ಗೂ ಅಧಿಕ ಗೋಲ್ ಮಾಲ್ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ಕುರಿತು ಆಡಳಿತ ಮಂಡಳಿ, ಮ್ಯಾನೇಜರ್, ಸಿಇಒಗಳಿಂದ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ನಾಮದೇವ ಸಾಲಾಪುರ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಹೀಗಾಗಿ ಬ್ಯಾಂಕ್ ಆಡಳಿತ ಮಂಡಳಿಗೆ ನೊಟೀಸ್ ನೀಡಲಾಗಿದೆ.
ಒಂದು ಕುಟುಂಬದ 24 ಜನರು, ಇನ್ನೊಂದು ಕುಟುಂಬ ಸಮೂಹ ರಚಿಸಿಕೊಂಡು 15 ಜನರಿಗೆ ಹಾಗೂ ಮತ್ತೊಂದು ಕುಟುಂಬದ 3 ಜನರಿಗೆ ಸಾಲ ನೀಡಲಾಗಿದೆ. ಮೂರು ಪ್ರತ್ಯೇಕ ಕುಟುಂಬ ಸಮೂಹ ರಚಿಸಿಕೊಂಡು ಒಟ್ಟು 10 ಕೋಟಿ 66 ಲಕ್ಷ ಸಾಲ ಪಡೆದಿದ್ದಾರೆ. ಬಡ್ಡಿಯಲ್ಲಿಯೂ ಒಬ್ಬೊಬ್ಬರಿಗೆ ಮನಬಂದಂತೆ ಬಡ್ಡಿ ಫಿಕ್ಸ್ ಮಾಡಲಾಗಿದೆ. ಈ ಮೂಲಕ ಅಕ್ರಮ ನಡೆದಿದೆ ಎನ್ನಲಾಗಿದೆ.
9 ನ್ಯೂನ್ಯತೆ, ನಿಯಮ ಉಲ್ಲಂಘನೆ ಬಹಿರಂಗವಾಗಿದೆ. ಬ್ಯಾಂಕ್ ನಿಯಮ ಉಲ್ಲಂಘನೆ ಹಿನ್ನೆಲೆ ಬ್ಯಾಂಕ್ ಆಡಳಿತ ಮಂಡಲಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.