ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಮದ್ಯೆ ಚುನಾವಣಾ ಅಕ್ರಮ ಕೂಡ ಬಿರುಸಿನಿಂದಲೇ ನಡೆಯುತ್ತಿದೆ. ಮತದಾರನ್ನು ಸೆಳೆಯುವುದಕ್ಕಾಗಿ ಹಣ, ಹೆಂಡ ಸೇರಿದಂತೆ ಹಲವು ವಸ್ತುಗಳನ್ನು ಹಂಚಲಾಗುತ್ತಿದೆ. ಸದ್ಯ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದು ವಶಪಡಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ 200 ಕೋಟಿ ರೂ. ಗೂ ಮೀರಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ರಾಜ್ಯಾದ್ಯಂತ 76.70 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದಿನವೊಂದಕ್ಕೆ ಸುಮಾರು ಒಂದೂವರೆ ಕೋಟಿಗೂ ಅಧಿಕ ನಗದು ಸೀಜ್ ಮಾಡಲಾಗುತ್ತಿದೆ. ಪೊಲೀಸ್, ಎಫ್ ಎಸ್ ಮತ್ತು ಎಸ್ ಎಸ್ ಟಿ ತಂಡದಿಂದ ಇಲ್ಲಿಯವರೆಗೆ 60 ಕೋಟಿ ರೂ.ನಗದು ವಶ ಪಡಿಸಿಕೊಳ್ಳಲಾಗಿದೆ. ಐಟಿ ಇಲಾಖೆಯಿಂದ 16.36 ಕೋಟಿ ನಗದು ಸೀಜ್ ಮಾಡಲಾಗಿದೆ.
ಏಜೆನ್ಸಿಗಳು 42.82 ಕೋಟಿ ಮೌಲ್ಯದ ಮದ್ಯ ವಶಪಡಿಸಿಕೊಂಡಿವೆ. ನಿನ್ನೆ ಒಂದೇ ದಿನ 1.89 ಕೋಟಿ ಮೌಲ್ಯದ 90 ಲಕ್ಷ ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಈ ಸಂದರ್ಭದಲ್ಲಿ 15 ಕೋಟಿ ಮೌಲ್ಯದ 915 ಕೆಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ.