ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್ ಫಾರ್ಮ್ ವಾಟ್ಸ್ ಆಪ್ ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 74 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ.
ವಾಟ್ಸ್ ಆಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. 7,452,500 ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಕೂಡ ಭಾರತದಲ್ಲಿ 47 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿರ್ಬಂಧಿಸಲಾಗಿತ್ತು.
ಬಳಕೆದಾರರ ದೂರುಗಳಿಗೆ ಮುಂಚಿತವಾಗಿ WhatsApp ಸುಮಾರು 25 ಸಾವಿರ ವಾಟ್ಸಾಪ್ ಅಕೌಂಟ್ಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಜೂನ್ 1 ರಂದು ಪ್ರಕಟವಾದ ವಾಟ್ಸ್ ಆಪ್ನ ಮಾಸಿಕ ವರದಿಯ ಪ್ರಕಾರ, ಏಪ್ರಿಲ್ 1 ರಿಂದ ಏಪ್ರಿಲ್ 30 ರ ನಡುವೆ, ಈ ಎಲ್ಲಾ ವಾಟ್ಸ್ ಆಪ್ ಖಾತೆಗಳನ್ನು ಮುಚ್ಚಲಾಗಿದೆ ಹೇಳಿದೆ.
ಮೇ 1 ರಂದು ಬಿಡುಗಡೆ ಮಾಡಿದ ವರದಿಯಲ್ಲಿ, ಮಾರ್ಚ್ ತಿಂಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಸುಮಾರು 47 ಲಕ್ಷ ಖಾತೆಗಳನ್ನು ಮುಚ್ಚಿದೆ ಎಂದು ವಾಟ್ಸ್ ಆಪ್ ತಿಳಿಸಿತ್ತು. ಸದ್ಯ ಮತ್ತೆ ಇಷ್ಟೊಂದು ಪ್ರಮಾಣದಲ್ಲಿ ವಾಟ್ಸ್ ಆಪ್ ರದ್ದು ಮಾಡಿದೆ.