ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿ, ಮಗ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳ ತಾಯಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ನವಲತ (26) ಮತ್ತು ಮಗ ಅಂಜನ್ ಕುಮಾರ್ (5) ಮೃತದುರ್ದೈವಿ. ನಿನ್ನೆ ಸಂಜೆ 6 ಗಂಟೆಗೆ ತೋಟದ ಕಡೆ ತಾಯಿ ಮತ್ತು ಮಗ ಹೋಗಿದ್ದಾರೆ. ತೋಟಕ್ಕೆ ಹೋದವರು ಎಷ್ಟೊತ್ತಾದರು ಮನಗೆ ವಾಪಸ್ ಆಗಲಿಲ್ಲ. ಇದರಿಂದ ಸಂಶಯಗೊಂಡ ಸಂಭಂದಿಕರು ಹುಡುಕಾಡಿದಾಗ, ತೋಟದ ಬಳಿಯ ಸಂಪಿನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತಳ ಸಂಬಂಧಿಕರು ದೂರು ದಾಖಲಿಸಿದ್ದಾರೆ. ತಮ್ಮ ಮಗಳಿಗೆ ಗಂಡ ಸೊಣ್ಣೇ ಗೌಡ, ಈತನ ತಂದೆ ರಾಮಣ್ಣ, ತಾಯಿ ಪಿಳ್ಳಮ್ಮ, ಸೋದರರಾದ ಮುರುಳಿ, ಚಂದ್ರು, ಗಾಯತ್ರಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಆರೋಪಿಸಿ ದೂರು ದಾಖಲಿಸಲಾಗಿದೆ.