ಕಾರು ಹರಿದು ತಾಯಿ-ಮಗು ಸಾವು road accident saaksha tv
ವಿಜಯಪುರ : ಕಾರು ಹರಿದು ತಾಯಿ-ಮಗು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
35 ವರ್ಷದ ಗೀತಾ ಪೂಜಾರಿ ಹಾಗೂ ಆಕೆಯ ಮಗ ಮಂಜು ಪೂಜಾರಿ ಮೃತ ದುರ್ದೈವಿಗಳು.
ಜಿಲ್ಲೆಯ ತಿಡಗುಂದಿ ಬಳಿಯ ಎನ್ ಎಚ್ 50 ಹೆದ್ದಾರಿ ಮೇಲೆ ಗೀತಾ ಪೂಜಾರಿ ಮತ್ತು ಮಂಜು ಪೂಜಾರಿ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಕೆಎ 28 ಪಿ 0922 ನಂಬರಿನ ಕಾರು ಇವರಿಬ್ಬರ ಮೇಲೆ ಹರಿದಿದೆ. ಪರಿಣಾಮ ತಾಯಿ, ಮಗು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದೆ.
ಇದನ್ನ ಗಮನಿಸಿದ ಸ್ಥಳೀಯರು ಕಾರು ಚಾಲಕನನ್ನು ಹಿಡಿದು, ತಿಡಗುಂದಿ ಹೊರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.