ನೀರಿಗೆ ಬಿದ್ದು ತಾಯಿ ಮಗಳು ಆತ್ಮಹತ್ಯೆಗೆ ಶರಣು Saaksha Tv
ಕೋಲಾರ: ನೀರಿಗೆ ಬಿದ್ದು ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮಂಡ್ಯಾಲ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದವರು, 24 ವರ್ಷದತಾಯಿ ಮಂಜುಳಾ, 2 ವರ್ಷದ ಮಗಳು ಶಾಲಿನಿ ಎಂದು ಹೇಳಲಾಗುತ್ತಿದೆ.
ಎರಡು ದಿನದಗಳ ಹಿಂದೆ ತಾಯಿ ಮತ್ತು ಮಗಳು ಕಾಣೆಯಾಗಿದ್ದರು. ಇಂದು ಚೆಕ್ ಡ್ಯಾಂ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತಿ ರವಿ ವರದಕ್ಷಿಣೆಯ ಸಲುವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಂಜುಳ ಕುಟುಂಬಸ್ಥರಿಂದ ರವಿ ವಿರುದ್ಧ ರಾಯಲಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.