ಉತ್ತರ ಕನ್ನಡ: ಸಾರಿಗೆ ಬಸ್ ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಂಕಿ ಎಂಬಲ್ಲಿ ಈ ಘಟನೆ ನಡೆದಿದೆ. ಸವಿತಾ ಆಚಾರಿ (40) ಹಾಗೂ ಅಂಕಿತಾ ಆಚಾರಿ (17) ಸಾವನ್ನಪ್ಪಿದ ತಾಯಿ ಹಾಗೂ ಮಗಳು ಎನ್ನಲಾಗಿದೆ. ಮೃತರು ಮಂಕಿ ಜಾತ್ರೆ ಪೇಟೆಗೆ ತೆರಳಿ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನಿಂದ ಬರುತ್ತಿದ್ದ ಬಸ್, ಸ್ಕೂಡಿಗೆ ಡಿಕ್ಕಿ ಹೊಡೆದಿದೆ. ಆಗ ಬಸ್ ನಡಿ ಇಬ್ಬರೂ ಸಿಲುಕಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.