ಧೋನಿಗಾಗಿ 1436 ಕಿ.ಲೋ. ಕಾಲ್ನಡಿಗೆಯಲ್ಲಿ ರಾಂಚಿಗೆ ಬಂದ ಅಭಿಮಾನಿ..

1 min read
ms-dhoni saaksha tv

ಧೋನಿಗಾಗಿ 1436 ಕಿ.ಲೋ. ಕಾಲ್ನಡಿಗೆಯಲ್ಲಿ ರಾಂಚಿಗೆ ಬಂದ ಅಭಿಮಾನಿ..

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅಭಿಮಾನಿಗಳಲ್ಲಿ ಇರುವ ಕ್ರೇಜ್ ನಃ ಭೂತೋ ನಃ ಭವಿಷ್ಯತಿ.

ಧೋನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ನಮ್ಮ ದೇಶದಲ್ಲಿ ಎಂಎಸ್ ಡಿಗಾಗಿ ಜೀವ ಕೊಡುವ ಅಭಿಮಾನಿಗಳಿದ್ದಾರೆ.

ಅದೇ ರೀತಿ ಹರಿಯಾಣ ಮೂಲದ ಅಜಯ್ ಗಿಲ್.. ಧೋನಿಯ ವೀರಾಭಿಮಾನಿ. ಚಿಕ್ಕನಂದಿನಿಂದಲೂ ಧೋನಿ ಅಂದರೇ ಅಜಯ್ ಗೆ ಹುಚ್ಚು.

ms-dhoni saaksha tv

ಜೀವನದಲ್ಲಿ ಒಮ್ಮೆಯಾದರೂ ಧೋನಿ ಅವರನ್ನ ಭೇಟಿಯಾಗುವ ಕನಸು ಅಜಯ್ ಅವರದ್ದಾಗಿತ್ತು. ಇದಕ್ಕಾಗಿ 1436 ಕಿ.ಮೀ ನಡೆದು ರಾಂಚಿ ತಲುಪಿದ್ದಾರೆ.

ಕಳೆದ ಬಾರಿ ಇದೇ ರೀತಿ ಕಾಲ್ನಡಿಯಲ್ಲಿ ಬಂದಿದ್ದ ಅಜಯ್ ಗೆ ಐಪಿಎಲ್ ನಿಂದಾಗಿ ನಿರಾಸೆ ಎದುರಾಗಿತ್ತು. ಆದ್ರೆ ಈ ಬಾರಿ ಅಜಯ್ ಕನಸು ನನಸಾಗಿದೆ.

ಧೋನಿ ತಮ್ಮ ಅಭಿಮಾನಿಯನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ ತಮ್ಮ ಫಾರ್ಮ್‍ಹೌಸ್‍ಗೆ ಆಹ್ವಾನಿಸಿ ಆಟೋಗ್ರಾಫ್ ಕೂಡ ನೀಡಿದ್ದಾರೆ. ಅಲ್ಲಿ ಊಟಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ.

ಇದರ ಬಗ್ಗೆ ಅಜಯ್ ಗಿಲ್ ಮಾತನಾಡುತ್ತಾ… ಮುಂದೊಂದು ದಿನ ಭಾರತವನ್ನು ಪ್ರತಿನಿಧಿಸಬೇಕೆಂದಿದ್ದೇನೆ ಎಂದು ಧೋನಿ ಬಳಿ ಹೇಳಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd