ಕತಾರ್ ಡ್ರಗ್ ಪ್ರಕರಣ – ಮುಂಬೈ ಮೂಲದ ದಂಪತಿ ಖುಲಾಸೆ

1 min read
Qatar drug case 2019

ಕತಾರ್ ಡ್ರಗ್ ಪ್ರಕರಣ – ಮುಂಬೈ ಮೂಲದ ದಂಪತಿ ಖುಲಾಸೆ

ಮುಂಬೈ ಮೂಲದ ದಂಪತಿಗಳಾದ ಒನಿಬಾ ಮತ್ತು ಶಾರಿಕ್ ಖುರೇಷಿ 2019 ರಲ್ಲಿ ಕತಾರ್‌ನಲ್ಲಿ ನಡೆದ ಮಾದಕವಸ್ತು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಗುರುವಾರ ತಮ್ಮ ಮಗಳೊಂದಿಗೆ ನಗರಕ್ಕೆ ಮರಳಿದರು.

ಮುಂಜಾನೆ 2.30 ಕ್ಕೆ ದಂಪತಿಗಳು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Qatar drug case 2019

ಕುಟುಂಬದ ಸದಸ್ಯರೊಬ್ಬರು ತಮ್ಮ ಬ್ಯಾಗ್‌ನಲ್ಲಿ ಮಾದಕವಸ್ತುಗಳನ್ನು ಅವರ ಅರಿವಿಲ್ಲದೆ ಇಟ್ಟಿದ್ದರು ಎಂಬುದು ಬೆಳಕಿಗೆ ಬಂದ ನಂತರ ದಂಪತಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ. ಇವರಿಗೆ 10‌ ವರ್ಷಗಳ ‌ಶಿಕ್ಷೆ ವಿಧಿಸಲಾಗಿತ್ತು.

ಆ ಸಮಯದಲ್ಲಿ, ಶಾರಿಕ್ ಜಪಾನ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಒನಿಬಾ ಗರ್ಭಿಣಿಯಾಗಿದ್ದರು. ಅವರು ಕಳೆದ ಫೆಬ್ರವರಿಯಲ್ಲಿ ಆಯತ್ ಎಂಬ ಹೆಣ್ಣು ಮಗುವಿಗೆ ಜೈಲಿನಲ್ಲಿ ಜನ್ಮ ನೀಡಿದ್ದರು. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ದಂಪತಿಯ ಕುಟುಂಬ ಸದಸ್ಯರು ಭಾರತ ಸರ್ಕಾರವನ್ನು ಸಂಪರ್ಕಿಸಿದರು.
Qatar drug case 2019

ಇದರ ಬೆನ್ನಲ್ಲೇ, ಕತಾರ್‌ನ ಅಧಿಕಾರಿಗಳೊಂದಿಗೆ ಮಾದಕವಸ್ತು ವಿರೋಧಿ ತನಿಖಾ ಸಂಸ್ಥೆ ಸಂಪರ್ಕ ಸಾಧಿಸಿತು ಮತ್ತು ದಂಪತಿಗೆ ಶಿಕ್ಷೆ ವಿಧಿಸುವ ಕೆಳ ನ್ಯಾಯಾಲಯದ ಆದೇಶವನ್ನು ಕುಟುಂಬ ಪ್ರಶ್ನಿಸಿತು. ಅಂತಿಮವಾಗಿ, ದಂಪತಿಗಳು ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ.

#Mumbaicouple #Qatardrugcase2019

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd