Murali Raju : RGV ಚಿಕ್ಕಪ್ಪ, ಖ್ಯಾತ ನಿರ್ಮಾಪಕ ಮುರುಳಿ ರಾಜು ನಿಧನ…
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಚಿಕ್ಕಪ್ಪ ಮತ್ತು ಬಾಲಿವುಡ್ ಸ್ಟಾರ್ ನಿರ್ಮಾಪಕ ಮಧು ಮಂಟೆನಾ ಅವರ ತಂದೆ ನಿರ್ಮಾಪಕ ಮುರಳಿ ರಾಜು ಮಂಗಳವಾರ ನಿಧನರಾಗಿದ್ದಾರೆ. ನಿರ್ಮಾಪಕರಾಗಿ ಹಲವು ಚಿತ್ರಗಳನ್ನು ನಿರ್ಮಿಸಿರುವ ಮುರಳಿರಾಜು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಮುರಳಿ ರಾಜು ಅವರು ಮಂಗಳವಾರ ಹೈದರಾಬಾದ್ ನ ಮಧುರಾನಗರದಲ್ಲಿರುವ ತಮ್ಮ ಮನೆಯಲ್ಲಿ 70 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮುರಳಿ ರಾಜು ನಿಧನಕ್ಕೆ ಟಾಲಿವುಡ್ ಮತ್ತು ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಲ್ಲು ಅರ್ಜುನ್, ಅಮೀರ್ ಖಾನ್, ಅಲ್ಲು ಅರವಿಂದ್.. ಹೀಗೆ ಹಲವು ತಾರೆಯರು ಮನೆಗೆ ತೆರಳಿ ಮುರಳಿರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮುರಳಿ ರಾಜು ಅವರು RGV ಚಿಕ್ಕಪ್ಪನಾಗಿದ್ದು, ಈ ಹಿಂದೆ ನಿರ್ಮಾಪಕರಾಗಿ ಹಲವು ಸಿನಿಮಾಗಳನ್ನ ಮಾಡಿದ್ದಾರೆ. ಅವರ ಪುತ್ರ ಮಧು ಮಂಟೇನಾ ಬಾಲಿವುಡ್‌ನಲ್ಲಿ ಸ್ಟಾರ್ ಪ್ರೊಡ್ಯೂಸರ್ ಆಗಿರುವ ಹಿನ್ನೆಲೆಯಲ್ಲಿ ಅನೇಕ ಟಾಲಿವುಡ್ ಮತ್ತು ಬಾಲಿವುಡ್ ಗಣ್ಯರು ಆಗಮಿಸಿ ಅವರಿಗೆ ಗೌರವ ಸಲ್ಲಿಸಿದರು. ಈ ಹಿಂದೆ ಹಲವು ಬಾರಿ ಆರ್‌ಜಿವಿ ಕೂಡ ತಮ್ಮ ಚಿಕ್ಕಪ್ಪ ನನಗೆ ಸಿನಿಮಾದಲ್ಲಿ ಮೊದಲ ಗುರು, ಅವರೇ ನನಗೆ ಸಿನಿಮಾ ಮಾಡಲು ಪ್ರೇರೇಪಿಸಿದರು ಎಂದು ಹೇಳಿಕೊಂಡಿದ್ದಾರೆ. ಮುರಳಿ ರಾಜು ನಿಧನದಿಂದ ಆರ್‌ಜಿವಿ ಮನೆಯಲ್ಲಿ ದುಃಖ ಮಡುಗಟ್ಟಿತ್ತು.
Murali Raju : RGV’s uncle, famous producer Murali Raju passed away…