ಚಂಡೀಗಢ: ವಿವಾಹಿತ ಉದ್ಯಮಿಯೊಬ್ಬ (Businessman) ತನ್ನೊಂದಿಗಿದ್ದ ಲಿವ್-ಇನ್ ಗೆಳತಿಯನ್ನು ಕೊಲೆ ಮಾಡಿ ದೇಹವನ್ನು ಸುಟ್ಟುಹಾಕಿರುವ ಘಟನೆ ಹರಿಯಾಣದ ಸೋನಿಪತ್‌ನಲ್ಲಿ (Haryana’s Sonipat) ನಡೆದಿದೆ.
ಸರಿತಾ ಕೊಲೆಯಾದ ಮಹಿಳೆ ಹಾಗೂ ಸಿವಿಲ್ ಲೈನ್ಸ್ ಪ್ರದೇಶದ ರಿಷಿ ಕಾಲೋನಿಯಲ್ಲಿ ಉಪಕಾರ್ ಕೊಲೆ ಮಾಡಿರುವ ಆರೋಪಿ. ಪಂಜಾಬ್‌ನ (Punjab) ಜಿರಾಕ್‌ಪುರ ನಿವಾಸಿಯಾಗಿರುವ ಸರಿತಾ ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದಳು. ಈಕೆ ಪತಿಯಿಂದ ಬೇರ್ಪಟ್ಟು 6 ವರ್ಷಗಳಿಂದ ಉದ್ಯಮಿಯೊಂದಿಗೆ ವಾಸಿಸುತ್ತಿದ್ದರು.
ಅಕ್ಟೋಬರ್ 25ರಂದು ಸರಿತಾಳನ್ನ ಕೊಂದಿರುವ ಉಪಕಾರ್ ಆಕೆಯ ದೇಹದೊಂದಿಗೆ ಇಡೀ ಮನೆಯನ್ನೇ ಸುಟ್ಟುಹಾಕಿದ್ದಾನೆ. ನಂತರ ಇದೊಂದು ಆಕಸ್ಮಿಕ ಬೆಂಕಿ ಅವಘಡ ಎನ್ನುವಂತೆ ಬಿಂಬಿಸಿದ್ದಾನೆ. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆಯ ನಂತರ ಸುಟ್ಟ ಗಾಯಕ್ಕೂ ಮುನ್ನ ಚೂರಿ ಇರಿದಿರುವುದು ಕಂಡು ಬಂದಿದೆ. ಹೀಗಾಗಿ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








