murder ಇಂದಿನ ದಿನಮಾನದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಸಂಖ್ಯೆ ಜನಸಾಮಾನ್ಯರ ಮೈ ಝೋಂ ಎನ್ನುವಂತೆ ಮಾಡಿವೆ .
ಸಂಭಂದಗಳ ಮೇಲೆ ನಂಬಿಕೆ ಹೊರಟು ಹೊಗುವಂತೆ ಮಾಡಿವೆ ಮಾಡಿವೆ . ಈಗ ಇದೇ ಸಾಲಿಗೆ ದಾವಣಗೆರೆಯಲ್ಲಿ ನಡೆದ ಘಟನೆ ಸೇರಿದೆ.
6 ತಿಂಗಳ ಹಿಂದೆ ಅದ್ದೂರಿಯಾಗಿ ಮದುವೇಯಾಗಿದ್ದ ಜೋಡಿ ಕೊಲೆಯಲ್ಲಿ ಕೊನೆಗೊಂಡಿದೆ
ಮದುವೆಯಾಗಿ ಒಂದೇ ತಿಂಗಳಿಗೆ ಪತ್ನಿ ಗರ್ಭಿಣಿಯಾದಳೆಂದು ಪತ್ನಿಯ ಶೀಲದ ಮೇಲೆ ಅನುಮಾನ ಗೊಂಡ ಪತಿ ಮಹಾಶಯ ಮಾಡಿದ ಹಿನಾಯ ಕೃತ್ಯವಿದು .
ಗರ್ಭಿಣಿ ಪತ್ನಿಯ ಶೀಲವನ್ನು ಶಂಕಿಸಿದ ಪಾಪಿ ಪತಿ ಆಕೆಯ ಕೊಲೆ ಮಾಡಿ ದೋಡ್ಡ ಕಾಡಿನ ಮಧ್ಯೆ ಹೂತು ವಿಕೃತಿ ಮೆರೆದಿದ್ದಾನೆ.
ಈ ಅಮಾನುಶ್ಯ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದ್ದು ಮೃತ ಮಹಿಳೆಯನ್ನು ರಶ್ಮಿ ಎಂದು ಗುರುತಿಸಲಾಗಿದೆ .ರಶ್ಮಿಗೆ ಕೇವಲ 20 ವರ್ಷ ವಯಸ್ಸು ಹೊಟ್ಟೆ ಬಟ್ಟೆ ಕಟ್ಟಿ ಸಾಕಿ ಸಲಹಿದ್ದ ಮುದ್ದಾ ಬೇಳಸಿದ ಮಗಳನ್ನು ಗಿಳಿಯನ್ನು ಗಿಡುಗನ ಕೈಗೆ ಕೊಟ್ಟ ಹಾಗೆ ಇಷ್ಟು ಬೇಗ ಮದುವೆ ಮಾಡಿಕೊಟ್ಟು ಸ್ಮಾಶಾನಕ್ಕೆ ಕಳುಹಿಸಿದೆವು ಎಂದು ರಶ್ಮಿ ಕುಟುಂಬಸ್ಥ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ವಿವರ
ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ, ರತ್ನಮ್ಮ ಎಂಬ ದಂಪತಿಯ ಕೊನೆಯ ಪುತ್ರಿ ರೇಷ್ಮಾಳನ್ನು ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯ ಮೋಹನ್ ಕುಮಾರ್ ನೊಂದಿಗೆ ಏಪ್ರಿಲ್ 13 ರಂದು ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು . ಮದುವೆ , ಸಂಸಾರ ಎಂದರೇನು ಎನ್ನುವುದನ್ನು ಅರಿಯಲು ಸಮಯ ಸಿಗದೇ ಪತಿ ಪತ್ನಿಯನ್ನು ಹತ್ಯೆ ಮಾಡಿ ಪೈಶಾಚಿಕ ಕೃತ್ಯಕ್ಕೆ ಪ್ರಾಣತೆತ್ತಿದ್ದಾಳೆ .
ಮದುವೆಯಾಗಿ ಒಂದೇ ತಿಂಗಳಿಗೆ ಪತ್ನಿ ಗರ್ಭಿಣಿಯಾದಳೆಂದು ಪತ್ನಿಯ ಶೀಲದ ಮೇಲೆ ಅನುಮಾನ ಗೊಂಡ ಪತಿ ಮಹಾಶಯ ಪತ್ನಿಯ ಮೇಲೆ ಅನುಮಾನದ ಹುತ್ತ ಬೇಳೆದಿದ್ದು ರಶ್ಮಿ ಯಾರ ಜೊತೆ ಮಾತನಾಡಿದರೂ ಅನುಮಾನ ಪಡಲು ಆರಂಭಿಸಿದ್ದ, ಈ ವಿವಯವಾಗಿ ಪದೇ ಪದೇ ಜಗಳಮಾಡುತ್ತಿದ್ದ.
ಈ ವಿಷಯದ ಕುರಿತು ಹಲವು ಭಾರಿ ರಶ್ಮಿ ತನ್ನ ತವರಿಗೆ ತಿಳಿಸಿದ್ದಳು, ಕೆಲವು ಭಾರಿ ರಾಜೀ ಸಂಧಾನವನ್ನು ಸಹ ಮಾಡಿ ಸರಿಪಡಿಸುತ್ತಿದ್ದರು . ಇಷ್ಟೇಲ್ಲಾ ಆದರೂ ಅನುಮಾನ ಹೆಚ್ಚಾಗಿ ತಿಂಗಳುಗಳಿಂದ ಸಂಚು ಹಾಕಿ ಹೊಂಚು ಮಾಡಿ ಮೋಹನ್ ಪತ್ನಿಯನ್ನು ಕೊಲೆ ಮಾಡಿ ಹೂತು ಹಾಕಿದ್ದಾನೆ.
ಹತ್ಯೆಗೆ ಪ್ಲಾನ್ ಮಡಿದ ಹಂತಕ
ಹೆಂಡತಿಯನ್ನು ಕೊಲೆ ಮಾಡಲು ಮೊದಲೇ ಯೋಜಿಸಿ ಮೋಹನ್ ತಿಂಗಳ ಹಿಂದೆಯೇ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕುನ ಬಳಿ ಶಿರಗಲಿಪುರ ಕಣಿವೆ ಸಮೀಪ ಗುಂಡಿ ತೋಡಿ ಸ್ಥಳ ಗುರುತು ಮಾಡಿ ಹೋಗಿದ್ದ.
ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದ ಮೋಹನ್ ಅಕ್ಟೋಬರ್ 8 ರಂದು ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ರಶ್ಮಿಯ ಕತ್ತು ಹಿಸುಕಿ ಕೊಲೆ ಮಾಡಿ ಮಧ್ಯರಾತ್ರಿ ಮೃತ ದೇಹವನ್ನು ಕಾರಿನಲ್ಲಿ ಹಾಕಿಕೊಂಡು ತಾನು ತೆಗೆದಿದ್ದ ಗುಂಡಿಗೆ ಹೊಗಿ ಹೂತು ಬಂದಿದ್ದಾನೆ.
ಕೊಲೆ ಮಾಡಿದ ರಾತ್ರಿ 2 ಗಂಟೆಗೆ ಆಕೆಯ ಮನೆಯವರಿಗೆ ಪೋನ್ ಮಾಡಿ ರಶ್ಮಿ ಕಾಣಿಸುತ್ತಿಲ್ಲ. ಎಲ್ಲಿ ಹೊಗಿದ್ದಾಳೆ ಎಂದು ನಾಟಕ ಮಾಡಿದ್ದಾನೆ.
ವಿಷಯ ತಿಳಿದು ತವರು ಮನೆಯವರು ಬಂದಾಗ ನಿಮ್ಮ ಮಗಳು ಯಾರ ಜೊತೆಯಲ್ಲೋ ಓಡಿ ಹೋಗಿದ್ದಾಳೆ ಎಂದು ಮೋಹನ್ ಮತ್ತೆ ನಾಟಕ ಶುರು ಮಾಡಿದ್ದ. ಅವನ ಮೇಲೆ ಅನುಮಾನ ಗೊಂಡು ಕೇಳಿದಾಗ ಗ್ರಾಮ ದೇವರ ಮೂರ್ತಿ ಮೇಲೆ ಪ್ರಮಾಣ ಮಾಡಿ ನಾನು ಕೊಲೆ ಮಾಡಿಲ್ಲ ಎಂದು ಹೇಳಿದ್ದ.ಎಲ್ಲಿ ಹೋಗಿದ್ದಾಳೋ ಗೊತ್ತಿಲ್ಲ ಎಂದು ಹೇಳಿದ್ದ.
ರಶ್ಮಿ ಸಂಬಂಧಿಕರ ಒತ್ತಾಯದ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ. ಆದರೆ ರಶ್ಮಿ ಪಾಲಕರಿಗೆ ಮೋಹನ್ ಮೇಲೆ ಬಲವಾದ ಅನುಮಾನವಿದ್ದ ಕಾರಣ ಮೋಹನ್ಮೇಲೆ ದೂರು ದಾಖಲಿಸಿದ್ರು ದೂರು ಪಡೆದ ಪೊಲೀಸರು ತನಿಖೆ ನಡೆಸಿದ ವೇಳೆ ಮೋಹನ್ ನೀಚ ಕೃತ್ಯ ಬೇಳಕಿಗೆ ಬಂದಿದೆ .
ಘಟನೆ ತಿಳಿದು ಸ್ಥಳಕ್ಕೆ ಅಜ್ಜಂಪುರ ತಾಹಶೀಲ್ದಾರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಶವವನ್ನು ಹೂತಿಟ್ಟ ಸ್ಥಳವನ್ನು ಖಚಿತ ಪಡಿಸಿಕೊಳಲು ಇಂದು ಪೊಲೀಸರು ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.