ಮೈಸೂರಲ್ಲಿ ಪತಿಯಿಂದಲೇ ಪತ್ನಿಯ ಕೊಲೆ

1 min read
thiruvananthapuram

Mysore ಮೈಸೂರಲ್ಲಿ ಪತಿಯಿಂದಲೇ ಪತ್ನಿಯ ಕೊಲೆ

ಮೈಸೂರು : ಅಕ್ರಮ ಸಂಬಂಧ ಹಿನ್ನೆಲೆ ಪತಿ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಮೈಸೂರಿನ ಜಯನಗರದಲ್ಲಿ ನಡೆದಿದೆ. ನಳಿನಿ(32) ಮೃತ ದುರ್ದೈವಿ. ರಾಜೇಶ್ (40) ಕೊಲೆ ಆರೋಪಿಯಾಗಿದ್ದಾರೆ. ಸದ್ಯ ಇವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಮಕ್ಕಳ ತಾಯಿ ನಳಿನಿಗೆ ಪರಪುರುಷನ ಜತೆ ಅಕ್ರಮ ಸಂಬಂಧ ಇತ್ತು. ಈ ವಿಚಾರದಲ್ಲಿ ದಂಪತಿ ನಡುವೆ ಹಲವು ಬಾರಿ ಗಲಾಟೆ ಆಗಿತ್ತು.

Mysore

ಇದರಿಂದ ರಮಾಬಾಯಿ ನಗರದಿಂದ ಜಯನಗರಕ್ಕೆ ಪತಿ ರಾಜೇಶ್ ಮನೆ ಶಿಫ್ಟ್ ಮಾಡಿದ್ದರು. ಹೀಗಿದ್ದೂ ನಳಿಸಿ ಅಕ್ರಮ ಸಂಬಂಧ ಮುಂದುವರಿಸಿದ್ದಳಂತೆ.

ಇದರಿಂದ ರೋಸಿ ಹೋದ ರಾಜೇಶ್ ಕುಡಿದ ಮತ್ತಿನಲ್ಲಿ ನಳಿನಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ರಾಜೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd