ಹೃದಯಘಾತದಿಂದಾಗಿ ರಿಂಗ್ ನಲ್ಲೇ ಮೃತಪಟ್ಟ ಬಾಕ್ಸರ್ ಮೂಸಾ ಯಮಕ್
ಟರ್ಕಿ ದೇಶದ ಬಾಕ್ಸರ್ ಮೂಸಾ ಯಮಕ್ ಬಾಕ್ಸಿಂಗ್ ಪಂದ್ಯ ನಡೆಯುತ್ತಿರುವ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಪಂದ್ಯದ ವೇಳೆ 38 ವರ್ಷದ ಮೂಸಾ ಅಸ್ಕನ್ ಯಮಕ್ ಅವರ ಉಗಾಂಡಾದ ಹಮ್ಜಾ ವಂದೆರಾ ಅವರ ವಿರುದ್ಧ ಪಂದ್ಯ ನಡೆಯುತ್ತಿರುವ ವೇಳೆ ಹಠಾತ್ ಕುಸಿದು ಬಿದ್ದಿದ್ದರು. ಪಂದ್ಯದ ಮೂರನೇ ಸುತ್ತು ಆರಂಭಕ್ಕೂ ಮುನ್ನ ಮೂಸಾ ಯಮಕ್ ರಿಂಗ್ ನಲ್ಲಿ ಕುಸಿದು ಬಿದ್ದರು. ತಕ್ಷಣವೇ ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೋಯ್ದರು ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಪಂದ್ಯದ ವೇಳೆ ಎರಡನೇ ಸುತ್ತಿನಲ್ಲಿ ಎದುರಾಳಿ ಸ್ಪರ್ಧಿ ವಂದೆರಾ ಅವರು ಮೂಸಾ ಯಮಕ್ ಗೆ ಬಲವಾದ ಪಂಚ್ ನೀಡಿದ್ದರು. ಆ ಬಳಿಕ ಮೂರನೇ ಸುತ್ತಿನ ಆರಂಭಕ್ಕೆ ರೆಫ್ರಿ ಸೂಚನೆ ನೀಡಿದರು. ಆದರೆ ಮೂಸಾಗೆ ಅಷ್ಟರಲ್ಲಿ ಹೃದಯಾಘಾತವಾಗಿತ್ತು. ಅವರು ರಿಂಗ್ ನಲ್ಲಿಯೇ ಕುಸಿದು ಬಿದ್ದರು.
2017 ರಲ್ಲಿ ಮೂಸಾ ಯಮಕ್ ವೃತ್ತಿಪರ ಬಾಕ್ಸಿಂಗ್ ಗೆ ಎಂಟ್ರಿ ಕೊಟ್ಟಿದ್ದರು. ಚಿಕ್ಕ ವಯಸ್ಸಿನಲ್ಲಿ ಯುರೋಪಿಯನ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ಗಳನ್ನ ಗೆದ್ದಿದ್ದೆರು. ಮೂಸಾ ಇಲ್ಲಿಯವರೆಗೆ ಯಾವುದೇ ನಾಕೌಟ್ ಪಂದ್ಯಗಳನ್ನ ಸೋತಿಲ್ಲ. ಆಡಿದ ಎಲ್ಲಾ 8 ಪಂದ್ಯಗಳನ್ನ ಗೆದ್ದುಕೊಂಡಿದ್ದರು.