ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ (Ilayaraja) ಪುತ್ರಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಗಾಯಕಿ ಭವತಾರಿಣಿ (Bhavatarini) ಇಹಲೋಕ ತ್ಯಜಿಸಿದ್ದಾರೆ.
ಭವತಾರಿಣಿ ಅವರು ಹಲವು ವರ್ಷಗಳಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುವುದಕ್ಕಾಗಿ ಶ್ರೀಲಂಕಾಗೆ ತೆರಳಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಇಂದು ಅವರ ಪಾರ್ಥಿವ ಶರೀರ ಚೆನ್ನೈಗೆ ತರಲಾಗುತ್ತಿದೆ ಎಂದು ಅವರ ಪತಿ ಬಾಲಾಜಿ ಹೇಳಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದು, ಯುವನ್ ಶಂಕರ್ ರಾಜಾ ಮತ್ತು ಭವತಾರಿಣಿ ಸಂಗೀತ ಕ್ಷೇತ್ರದಲ್ಲಿಯೇ ಗುರುತಿಸಿಕೊಂಡಿದ್ದರು. ಯುವನ್ ಶಂಕರ್ ಸಂಗೀತ ನಿರ್ದೇಶಕರಾಗಿದ್ದರೆ ಭವತಾರಿಣಿ ಗಾಯಕಿ. ಗಾಯಕಿ ಭವತಾರಿಣಿ ಮಾಯಿಲ್ ಪೋಲ ಪೊನ್ನು ಒನ್ನು ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.