ಮ್ಯೂಸಿಕಲ್ ಲವ್ ಕಹಾನಿ ಮನಸ್ಮಿತ ಸಾಂಗ್ಸ್ ರಿಲೀಸ್.. ಜೂ.3 ಕ್ಕೆ ಸಿನಿಮಾ ರಿಲೀಸ್
ಸಂಗೀತ ಪ್ರಿಯರ ಮನಸೂರೆಗೊಳಿಸಿ ಸಿನಿ ಪ್ರೇಮಿಗಳಿಗೆ ಲವ್ ಕಹಾನಿ ಹೇಳಲು ಬರುತ್ತಿದೆ ಮನಸ್ಮಿತ ಸಿನಿಮಾ.
ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿ ಕೇಳುಗರ ಹೃದಯ ಗೆದ್ದಿದೆ.
ಚಿತ್ರತಂಡದಿಂದ ಶಂಕರ್ ಮಹದೇವನ್ ಕಂಠಸಿರಿಯಲ್ಲಿ ಮೂಡಿ ಬಂದಿದ್ದ ಹಾಡನ್ನು ಈಗಾಗಲೇ ರಿಲೀಸ್ ಮಾಡಲಾಗಿದ್ದು, ಏಪ್ರಿಲ್ 28 ರಂದು ಮತ್ತೊಂದು ಹಾಡವನ್ನು ಬಿಡುಗಡೆ ಮಾಡಲಾಗಿದೆ.
ಅಂದಹಾಗೆ ಶಂಕರ್ ಮಹದೇವನ್ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ನೀಲ ಮೇಘ ಶ್ಯಾಮ ಹಾಡಿಗೆ ಜನರು ಫಿದಾ ಆಗಿದ್ದಾರೆ.
ಹಾಡಿಗೆ ಮಂಜು ಎಮ್ ದೊಡ್ಡಮಣಿ ಅವರು ಸಾಹಿತ್ಯ ಬರೆದಿದ್ದಾರೆ.
ಇತ್ತೀಚೆಗೆ ರಿಲೀಸ್ ಆಗಿರುವ 2 ನೇ ಹಾಡು ಮೆಲೋಡಿ ಸಾಂಗ್ ಆಗಿದ್ದು, ಮುದ್ದು ಬಾನುಲಿ ವರದಿ ಹಾಡು ಮೋಡಿ ಮಾಡುತ್ತಿದೆ.
ಈ ಹಾಡಿನಲ್ಲಿ ನಾಯಕ ನಾಯಕಿಯ ಕೆಮಿಸ್ಟ್ರಿ ಅಧ್ಬುತವಾಗಿ ತೋರಿಸಲಾಗಿದ್ದು, ಲೊಕೇಶನ್ ಗಳೂ ಕೂಡ ಕಣ್ಣಿಗೆ ಹಿತವನ್ನುಂಟು ಮಾಡುತ್ತಿವೆ.
ಕೆ. ಕಲ್ಯಾಣ್ ಸಾಹಿತ್ಯದ ಈ ಹಾಡಿಗೆ ಸಿನಿಮಾದ ಸಂಗೀತ ನಿರ್ದೇಶಕ ಹರಿಕಾವ್ಯ ಅವರು ಧ್ವನಿ ನೀಡಿದ್ದಾರೆ.
ಅವರ ಜೊತೆಗೆ ಹರಿಹರ, ಸನಾ ಮೌದತ್ತಿ ಈ ಹಾಡಿಗೆ ಕಂಠದಾನ ಮಾಡಿದ್ದಾರೆ.
ಮನಸ್ಮಿತ ಅಪ್ಪಣ್ಣ ಸಂತೋಷ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ.
ಈ ಹೊಸಬರ ದಂಡಿಗೆ ಹಿರಿಯ ನಟರ ಸಾಥ್ ಇದೆ. ಸಂಗೀತದ ಜೊತೆಗೆ ಪ್ರೀತಿಯ ಕಥೆ ಹೇಳುತ್ತಾ ಪ್ರೇಕ್ಷಕರನ್ನ ಮೆಚ್ಚಿಸೋಕೆ ಮನಸ್ಮಿತ ಜೂನ್ 3 ರಂದು ಸಿನಿಮಾ ಥಿಯೇಟರ್ ಅಂಗಳಕ್ಕೆ ಬರಲಿದೆ..
ಮನಸ್ಮಿತ ಸಿನಿಮಾವನ್ನು ಸೀತಮ್ಮ ವಿ.ಟಿ ನಿರ್ಮಾಣ ಮಾಡಿದ್ದು, ಚರಣ್ ಗೌಡ, ಸಂಜನಾ ದಾಸ್, ಅತುಲ್ ಕುಲಕರ್ಣಿ, ಪಲ್ಲವಿ ಪುರೋಹಿತ್, ಸುಚೇಂದ್ರ ಪ್ರಸಾದ್, ರಾಜೇಂದ್ರ ಕಾರಂತ್, M N ಸುರೇಶ್ @ ಮುಗು ಸುರೇಶ್, ಕರಿ ಸುಬ್ಬು, ಶಿಲ್ಪಾ, ವೀಣಾ ಪೊನ್ನಪ್ಪ, ಸೌಭಾಗ್ಯ, ಪ್ರದೀಪ್ ಶಾಸ್ತ್ರಿ, ಪ್ರದೀಪ್ ಪೂಜಾರಿ ಸೇರಿದಂತೆ ಹಲವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಮನಸ್ಮಿತ ಡೈರೆಕ್ಟರ್ ಅಪ್ಪಣ್ಣ ಸಂತೋಷ್ ಮಾತನಾಡಿ “ ತಾವು ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದು ಬಾಲ್ಯದಿಂದಲೇ ನಟನೆ ಸಿನಿಮಾರಂಗದ ಆಸೆ ಬೆಳೆಸಿಕೊಂಡು, ನಂತರ ಕಂಪನಿಗಳಲ್ಲಿ ಕೆಲಸಗಳನ್ನ ಮಾಡುತ್ತಾ ಬ್ಯುಸಿನೆಸ್ ಮ್ಯಾನೇಜರ್ ವರೆಗೂ ಅನುಭವ ಪಡೆದು ತಮ್ಮ 26ನೇ ವಯಸ್ಸಿನಲ್ಲಿಯೇ ಅಂದ್ರೆ 2011ರಲ್ಲಿ ಸ್ವಂತ ಕನ್ಸ್ಟ್ರಕ್ಷನ್ ಕಂಪನಿ ಸ್ಥಾಪನೆ ಮಾಡಿ ಆನಂತರ ಕೆಲ ಅಡಚಣೆಗಳನ್ನ ಎದುರಿಸಿ ಬಳಿಕ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದ್ದಾರೆ..
ಇದೇ ವೇಳೆ ಸಿನಿಮಾದ ಜರ್ನಿ ಬಗ್ಗೆಯೂ ತಿಳಿಸಿದ ಅವರು ತಾವು ಹಂಸಲೇಖರ ಪರಿಚಯದಿಂದ ಸಿಕ್ಕ ಶಕುಂತಲೆ ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿ ಕಾರಣಾಂತರಗಳಿಂದ ಆ ಸಿನಿಮಾ ಡ್ರಾಪ್ ಔಟ್ ಆಯ್ತು. ಆದ್ರೂ ಹಠ ಬಿಡದೇ ಸಿನಿಮಾ ಮಾಡಲೇಬೇಕೆಂಬ ಛಲದಲ್ಲಿ ಮನಸ್ಮಿತ ಸಿನಿಮಾ ಮಾಡೋದಕ್ಕೆ ಮುಂದಾದೆವು. ಮನಸ್ಮಿತ ಕಥೆ ಬರೆದು ನಿರ್ದೇಶನ ಮಾಡಿ ಸಿನಿಮಾ ಮುಗಿಸಿದ್ದೇವೆ.. ಜೂನ್ 3 ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದರು.
musical-love-kahaani-manasmita-songs-release









