Hubballi: ಹಿಂದೂ ಅಂಗಡಿಗಳಿಗೆ ಮುಸ್ಲಿಂರು ಬರಬೇಡಿ ಅಂತಾ ಬೋರ್ಡ್ ಹಾಕಿ ನೋಡೋಣ : ಇಸ್ಮಾಯಿಲ್ ತಮಟಗಾರ
1 min read
ಹಿಂದೂ ಅಂಗಡಿಗಳಿಗೆ ಮುಸ್ಲಿಂರು ಬರಬೇಡಿ ಅಂತಾ ಬೋರ್ಡ್ ಹಾಕಿ ನೋಡೋಣ : ಇಸ್ಮಾಯಿಲ್ ತಮಟಗಾರ
ಹುಬ್ಬಳ್ಳಿ: ಹಿಂದೂಗಳು, ಮುಸ್ಲಿಂರು ನಮ್ಮ ಅಂಗಡಿಗಳಿಗೆ ಬರಬೇಡಿ ಎಂದು ಬೋರ್ಡ್ ಹಾಕಿಕೊಳ್ಳಿ ಎಂದು ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು, ಬೆಲ್ಲದ್ ಶೋರೂಮ್ ನಲ್ಲಿ ಕಾರ್ ಮಾರುತ್ತಾರೆ. ಅಲ್ಲಿಗೆ ಬಂದ ಗ್ರಾಹಕರಿಗೆ ಜುಬ್ಬಾ, ದಾಡಿ ಇದ್ದವರಿಗೆ ಕಾರ ಕೊಡಲ್ಲಾ ಅಂತ ಬರೆದು ಹಾಕಲಿ ಎಂದು ಶಾಸಕ ಅರವಿಂದ ಬೆಲ್ಲದ ಅವರಿಗೆ ತಿರುಗೇಟು ನೀಡಿದರು.
ಅಲ್ಲದೇ ಹಿಂದೂಗಳು ಅಂಗಡಿಗಳ ಮುಂದೆ ಮುಸ್ಲಿಂರಿಗೆ ವ್ಯಾಪಾರ ಬೇಡ ಅಂತಾ ಬರೆದು ಹಾಕಿಸಲಿ. ಇದು ರಂಜಾನ್ ತಿಂಗಳು ಈಗ ಹಿಂದೂ ಅಂಗಡಿಗಳಿಗೆ ಮುಸ್ಲಿಂರು ಬರಬೇಡಿ ಅಂತಾ ಹಾಕಿ ನೋಡೋಣ. . ಹಿಂದೂ ಸಂಘಟನೆಗಳಿಗೆ ಬರೆದು ಹಾಕಿಸುವ ತಾಕತ್ ಇದೆಯಾ ಎಂದು ಸವಾಲೆಸೆದರು.
ಒಂದು ಕಾಲದಲ್ಲಿ ಜುಬ್ಬಾ, ಟೋಪಿ ಹಾಕಿದವರಿಗೆ ನಮಸ್ಕಾರ ಮಾಡುತ್ತಿದ್ದರು. ಜನ ಗೌರವ ಕೊಡುತ್ತಿದ್ದರು. ಆದರೆ ಬಜರಂಗ ದಳ, ಆರ್ಎಸ್ಎಸ್ ದೇಶದಲ್ಲಿ ಇಂಥಹ ಸ್ಥಿತಿ ತಂದಿದ್ದಾರೆ. ಕೋವಿಡ್ ಕಾಲದಲ್ಲಿ ಶವ ಸಂಸ್ಕಾರ ಮಾಡಿದ್ದೇ ಮುಸ್ಲಿಂ ಸಂಘಟನೆಗಳು. ಆಗ ಆರ್ಎಸ್ಎಸ್, ಬಜರಂಗದಳ ಎಲ್ಲಿದ್ದವು? ಎಂದು ಪ್ರಶ್ನಿಸಿದರು.