ಮೈಸೂರು ದಸರಾಗೆ ಸಾಂಪ್ರದಾಯಿಕ ಚಾಲನೆ Mysore Dasara saaksha tv
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಸಾಂಪ್ರದಾಯಿಕ ಚಾಲನೆ ಸಿಕ್ಕಿದೆ.
ಜಂಭೂ ಸವಾರಿಯಲ್ಲಿ ಭಾಗವಹಿಸಲಿರುವ ಗಜಪಡೆ ಅರಮನೆ ಅಂಗಳ ಪ್ರವೇಶಿಸಿದ್ದು, ಗಜಪಡೆಯನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪೂಜೆ ಮಾಡಿದ್ದಾರೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳ ಇಂದು ಮೈಸೂರಿಗೆ ಆಗಮಿಸಿವೆ.
ಮೈಸೂರು ಅರಮನೆಯ ಜಯಮಾತಾರ್ಂಡ ದ್ವಾರದ ಮೂಲಕ ಗಜಪಡೆ ಅರಮನೆ ಅಂಗಳ ಪ್ರವೇಶಿಸಿದೆ.